ಮುಂಬೈ, ಸೆ19: ಮುಂಬೈ ಬಾಂಬ್ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂನ ಕಿರಿಯ ಸಹೋದರ ಇಕ್ಬಾಲ್ ಕಾಸ್ಕರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ನಗ್ಪದಾ ಪ್ರದೇಶದ ನಿವಾಸಿ ಇಕ್ಬಾಲ್ ಕಾಸ್ಕರ್ನದು ಹಣ ಸುಲಿಗೆ ಪ್ರಕರಣದಲ್ಲಿ ಎತ್ತಿದ ಕೈ. ಈತ ತನ್ನ ಸಹೋದರ ದಾವೂದ್ ಇಬ್ರಾಹಿಂ ಹೆಸರು ಹೇಳಿ ದೊಡ್ಡ ದೊಡ್ಡ ಉದ್ಯಮಿಗಳಿಗೆ ಹಣ ನೀಡುವಂತೆ ಬೆದರಿಸುತ್ತಿದ್ದ. ಬೆದರಿಕೆಗೆ ಹೆದರಿ ಅನೇಕ ಉದ್ಯಮಿಗಳು ಇವನಿಗೆ ಈಗಾಗಲೇ ಹಣ ನೀಡಿದ್ದಾರೆ. ಆದರೆ ಒಬ್ಬ ಉದ್ಯಮಿ ಈತನ ವಿರುದ್ಧ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಇಬ್ರಾಹಿಂನನನ್ನು ಬಂಧಿಸಿದ್ದಾರೆ.