ಮಂಗಳೂರು, ಮಾ 06: ನಗರದಲ್ಲಿನ ಇಂದಿರಾ ಕ್ಯಾಂಟೀನ್ ಗೆ ಸಚಿವ ಯು.ಟಿ.ಖಾದರ್ ಮಂಗಳವಾರ ಚಾಲನೆ ನೀಡಿದರು. ಶಾಸಕ ಜೆ.ಆರ್. ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ, ಶಾಸಕ ಜೆ ಆರ್ ಲೋಬೋ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜ, ಮಂಗಳೂರು ಮೇಯರ್ ಕವಿತಾ ಸನಿಲ್ ಸೇರಿದಂತೆ ಹಲವು ಮಂದಿ ಮುಖಂಡರು ಉಪಸ್ಥಿತರಿದ್ದರು. ಇನ್ನು ನಗರದ ಕಾವೂರು,ಪಂಪ್ ವೆಲ್, ಸುರತ್ಕಲ್ಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿದೆ. ಕಡಿಮೆ ದರದಲ್ಲಿ ತಿಂಡಿಗಳನ್ನು ಪೂರೈಸುವ ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಇದು ಒಂದಾಗಿದ್ದು, ಬೆಳಗ್ಗಿನ ಉಪಹಾರಕ್ಕೆ 5 ರೂಪಾಯಿ ಮತ್ತು ಮಧ್ಯಾಹ್ನದ ಮತ್ತು ರಾತ್ರಿ ಊಟಕ್ಕೆ 10 ರೂಪಾಯಿ ದರದಲ್ಲಿ ನೀಡಲಾಗುತ್ತಿದೆ. ಇನ್ನು ಉದ್ಘಾಟನೆ ಬಳಿಕ ಜನಪ್ರತಿನಿಧಿಗಳು ಕ್ಯಾಂಟೀನ್ ತಿಂಡಿಗಳನ್ನು ಸವಿದರು.
ದಿನಂಪ್ರತಿ 500 ಮಂದಿಗೆ ಊಟ, ತಿಂಡಿ ವಿತರಣೆ ನಡೆಯಲಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ತಿಂಡಿ-ಊಟ ಬೇಕಾದವರು ಕೂಪನ್ ಪಡೆಯಬೇಕು. ಕೇಸರಿ ಬಾತ್, ಖಾರಾ ಬಾತ್, ಇಡ್ಲಿ ಉಪಹಾರದಲ್ಲಿ ಸೇರಿವೆ