ಮಾ 06: ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹಾಗೂ ನಿರೀಕ್ಷೆ ಹುಟ್ಟು ಹಾಕಿದ್ದ ನಟ ಉಪೇಂದ್ರ ಅವರ ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ ಚುನಾವಣೆಗೂ ಮುನ್ನವೇ ವಿಭಜನೆಯ ಹಾದಿ ಹಿಡಿಯುವ ಮುನ್ಸೂಚನೆ ಸಿಕ್ಕಿದೆ. ಇದಲ್ಲದೇ ತಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಉಪೇಂದ್ರ ಒಪ್ಪಿಕೊಂಡಿದ್ದಾರೆ .
ನಮ್ಮ ಪಕ್ಷದಲ್ಲಿ ನಾಯಕರು ಹಾಗೂ ಸೇವಕರ ಅಗತ್ಯವಿಲ್ಲ , ನಮಗೆ ಬೇಕಾಗಿರುವುದು ಕಾರ್ಮಿಕರು ಮಾತ್ರ. ಪ್ರಾರಂಭದಲ್ಲಿ ನನ್ನ ಚಿಂತನೆಗಳನ್ನು ಒಪ್ಪಿಕೊಂಡೇ ಎಲ್ಲರೂ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಈಗ ಪಾರ್ಟಿ ಫಂಡ್ ಸಂಗ್ರಹಿಸಬೇಕು, ಸಂಘಟನೆ ಮಾಡಬೇಕೆಂಬ ಅಪಸ್ವರ ಎತ್ತಿದ್ದಾರೆ. ಅಲ್ಲದೆ ತಮಗೆ ಬೇಕಾದವರಿಗೆ ಟಿಕೆಟ್ ಹಂಚಲು ಪ್ರಾರಂಭಿಸಿದರು . ನಮ್ಮ ಯೋಚನೆ ಹಣವಿಲ್ಲದೇ ವಿಚಾರಗಳನ್ನ ಜನರ ಮುಂದಿಟ್ಟು ಪಕ್ಷ ಮುನ್ನಡೆಸಲು ನಿರ್ಧರಿಸಿದ್ದೆ. ಆದರೆ ಇದೀಗ ಇವೆಲ್ಲದಕ್ಕೂ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಉಪೇಂದ್ರ ಹೇಳಿದ್ದಾರೆ.
ಅತ್ತ ಕಡೆ ಟಿಕೆಟ್ ಹಂಚಿಕೆ , ಸಮಿತಿ ರಚನೆಗೆ ಸಂಬಂಧಪಟ್ಟಂತೆ ಉಪೇಂದ್ರ ಅವರು ಎಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕೆಪಿಜೆಪಿಯ ಕೋರ್ ಕಮಿಟಿ ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.