ಮಂಗಳೂರು, ಮಾ 3: ನಗರದ ಪಡೀಲ್ ಸಮೀಪ ಮೇಲ್ಸೇತುವೆ ಬಳಿ ನಿನ್ನೆ ತಡರಾತ್ರಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಗೀಡಾದವರನ್ನು ತಮಿಳುನಾಡು ಮೂಲದ ಸೆಲ್ವಮಣಿ (38) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಊಟದ ಸಮಯ ತಮಿಳುನಾಡು ಮೂಲದ ಪೆಟ್ರೋಲ್ ಸುರೇಶ್ ಮತ್ತು ಸೆಲ್ವಮಣಿ ನಡುವೆ ಮದುವೆ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಕೊನಗೆ ಕೊಲೆಯಲ್ಲಿ ಅಂತ್ಯಕಂಡಿದೆ.
ಸರಕುಗಳನ್ನು ಲಾರಿಯಲ್ಲಿ ಹೊತ್ತು ತಮಿಳುನಾಡಿನಿಂದ ಮಂಗಳೂರಿಗೆ ಬಂದಿದ್ದು, ಈ ಇಬ್ಬರು ಕುಡಿದ ನಶೆಯಲ್ಲಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಮೃತದೇಹವನ್ನು ಕೆ.ಎಂ.ಸಿ ಶವಗಾರದಲ್ಲಿರಿಸಲಾಗಿದ್ದು, ಆರೋಪಿ ಪೆಟ್ರೋಲ್ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿದ್ದ ಇತರ ಲಾರಿ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.