ಬಂಟ್ವಾಳ, ಮಾ 2: ಜಾತ್ಯತೀತ ಮನೋಭಾವವನ್ನು ಮಕ್ಕಳಿಗೆ ತಿಳಿಸಲು ಮತ್ತು ದೇಶ ಪ್ರೇಮವನ್ನು ಬೆಳೆಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಸಾಧ್ಯ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿ ಬಂಟ್ವಾಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬಂಟ್ವಾಳ ಇದರ ಆಶ್ರಯದಲ್ಲಿ ರೋವರ್ಸ, ರೇಂಜರ್ಸ್ ಸಮಾಗಮ, ಸ್ಕೌಟ್ಸ್ ಗೈಡ್ಸ್ ಮೇಳ ಕ್ಲಬ್, ಬುಲ್ ಉತ್ಸವ 2017-18 ತಲಪಾಡಿ ಅಲ್ ಖಜನಾ ಕಮ್ಯೂನಿಟಿ ಹಾಲ್ ನಲ್ಲಿ ನಡೆಯಿತು. ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಶಿಸ್ತು ಸಂಯಮವನ್ನು, ಮತ್ತು ಜಾತ್ಯತೀತ ಮನೋಭಾವವನ್ನು ಮಕ್ಕಳಿಗೆ ತಿಳಿಸಲು, ದೇಶ ಪ್ರೇಮವನ್ನು ಬೆಳೆಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಸಾಧ್ಯ ಎಂದರು.
ಮುಂದಿನ ದಿನಗಳಲ್ಲಿ ಪ್ರತಿ ಶಾಲೆಗಳಲ್ಲಿ ಘಟಕ ಸ್ಥಾಪನೆಗೆ ಮತ್ತು ಶಿಕ್ಷಕರನ್ನು ತರಬೇತಿಗೊಳಿಸುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಸೇವೆಗೆ ಹೆಸರು ವಾಸಿಯಾದ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಬಲಿಷ್ಠರಾಗುತ್ತಾರೆ. ವ್ಯಕಿತ್ವ ವಿಕಸನ ಶಿಸ್ತಿನ ಶಿಕ್ಷಣ ಪಡೆಯುತ್ತಾರೆ ಎಂದರು.
ಈ ಸಂದರ್ಭ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಅಯುಕ್ತರು ಎನ್.ಜಿ ಮೋಹನ್, ಶಿಕ್ಷಣ ಸಂಯೋಜಕ ಶ್ರೀಕಾಂತ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮತ್ತು ಸ್ಕೌಟ್ಸ್ ಗೈಡ್ಸ್ ನ ನೋಡಲ್ ಅಧಿಕಾರಿ ರತ್ನಾವತಿ, ರಾಲಿ ನಿರ್ದೇಶಕ ದೇವದಾಸ್ ತುಂಬೆ ಉಪಸ್ಥಿತರಿದ್ದರು.