ಬಂಟ್ವಾಳ, ಫೆ 28: ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇಗುಲದಿಂದ ಬರುತ್ತಿದ್ದ ಅನುದಾನ ರದ್ದುಪಡಿಸಿದ್ದು ನಾನೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವ ರೈ, ಕೊಲ್ಲೂರು ಮೂಕಾಂಬಿಕ ದೇಗುಲದಿಂದ ಕಲ್ಲಡ್ಕ ಮತ್ತು ಪುಣಚ ಶಾಲೆಗೆ ಬರ್ತಾ ಇದ್ದ ಅನುದಾನವನ್ನು ರದ್ದು ಮಾಡಿದ್ದೇನೆ ಎಂದು ಸಮರ್ಥನೆ ಮಾಡಿದ್ದಾರೆ.
ದೇಗುಲದ ಹುಂಡಿಗೆ ಬರುತ್ತಿದ್ದ ಹಣ ಎರಡು ಶಾಲೆಗೆ ಹೋಗುತ್ತಿತ್ತು. ತಾಲೂಕಿನಲ್ಲಿ 332 ಅನುದಾನಿತ ಶಾಲೆಗಳಿವೆ. ಆದರೆ ಕಲ್ಲಡ್ಕದ ಎರಡು ಶಾಲೆಗಳಿಗೆ ಮಾತ್ರ ತಿಂಗಳಿಗೆ ನಾಲ್ಕು ಲಕ್ಷ ಸಂದಾಯ ಆಗುತ್ತಿತ್ತು. ಹೀಗಾಗಿ ತಾರತಮ್ಯ ನೀತಿ ಬೇಡವೆಂದು ಕಲ್ಲಡ್ಕ ಶಾಲೆಗೆ ಬರುತ್ತಿದ್ದ ಅನುದಾನವನ್ನು ರದ್ದುಪಡಿಸಿದ್ದೇನೆ ಎಂದು ರೈ ಸ್ಪಷ್ಟನೆ ನೀಡಿದ್ಧಾರೆ.