ಮಂಗಳೂರು, ಫೆ 27: ನಗರ ಯುನಿಟಿ ಆಸ್ಪತ್ರೆಗೆ ಬೆಲ್ಜಿಯಂ ಬ್ರುಸೆಲ್ಸ್ ನಲ್ಲಿರುವ ಯುರೋಪಿಯನ್ ಮೆಡಿಕಲ್ ಅಸೋಸಿಯೇಶನ್ ನ ಪ್ರತಿಷ್ಟಿತ ವೈದ್ಯಕೀಯ ಸೇವಾ ಪ್ರಶಸ್ತಿ ಲಭಿಸಿದೆ. ದುಬೈನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅರಬ್ ಹೆಲ್ತ್ ಕಾಂಗ್ರೆಸ್ ನಲ್ಲಿ ಯುನಿಟಿ ಆಸ್ಪತ್ರೆಯ ಅಧ್ಯಕ್ಷ ಡಾ. ಸಿ.ಪಿ ಹಮೀದ್ ರಹ್ಮಾನ್ ಅವರು ಈ ಪ್ರಶಸ್ತಿಯನ್ನು ಸ್ಬೀಕಾರ ಮಾಡಿದರು.
ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಯುನಿಟಿ ಆಸ್ಪತ್ರೆ ಕಳೆದ ನಾಲ್ಕು ದಶಕಗಳಿಂದ ಸಲ್ಲಿಸುತ್ತಿರುವ ಅತ್ಯುತ್ತಮ ಆರೋಗ್ಯ ಸೇವೆಗೆ ಇದು ನೀಡಿದ ಗೌರವವಾಗಿದೆ ಎಂದರು. ದೇಶದ ಆರೋಗ್ಯ ನೀತಿಯನ್ನು ಸುಧಾರಿಸುವಲ್ಲಿ ಪ್ರಯತ್ನನ್ನು ಮಾಡಬೇಕಾಗಿದೆ. ಮಂಗಳೂರು ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ತಾಣವಾಗಿ ಪರಿವರ್ತಿತವಾಗುತ್ತಿದೆ. ಹೀಗಾಗಿ ಆರೋಗ್ಯ ಸೇವೆಯ ಗುಣಮಟ್ಟ, ಕಡಿಮೆ ವೆಚ್ಚದ ಚಿಕಿತ್ಸೆ, ಆರೋಗ್ಯ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮಗಳು ನರ್ಸಿಂಗ್ ಮತ್ತು ವೈದ್ಯಕೀಯ ಸೇವೆಯ ಹಲವು ಆಯಾಮಗಳನ್ನು ಪರಿಗಣಿಸುವ ಅಗತ್ಯವಿದೆ ಎಂದರು .
ಪತ್ರಿಕಾಗೋಷ್ಟಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಹಾಗೂ ಮುಖ್ಯ ಕಾರ್ಯ ನಿರ್ವಾಹಕ ಡಾ. ಅನಂತ್ ಮೋಹನ್ ಪೈ ಉಪಸ್ಥಿತರಿದ್ದರು.