ಅನಿರೀಕ್ಷಿತವಾಗಿ ಇಹ ಲೋಕವನ್ನು ತ್ಯಜಿಸಿದ ಭಾರತೀಯ ಚಿತ್ರರಂಗದ ಮೋಹಕ ತಾರೆ ಖ್ಯಾತ ನಟಿ ಶ್ರೀದೇವಿ ಸಾವು ಭಾರತೀಯ ಚಿತ್ರರಂಗಕ್ಕೆ ದೊಡ್ಡ ನೋವಿನ ವಿಷಯವಾಗಿದ್ದೂ , ಇನ್ನು ಅವರ ಪಾರ್ಥೀವ ಶರೀರ ಭಾರತಕ್ಕೆ ಬಂದಿಲ್ಲ. ಸಂಬಂಧಿಕರ ಮದುವೆಗೆಂದು ಶ್ರೀದೇವಿ ಅವರು ಕುಟುಂಬ ಸಮೇತರಾಗಿ ದುಬೈಗೆ ತೆರಳಿದ್ದಾಗ ಈ ಸಾವು ಸಂಭವಿಸಿದೆ. ದುರಾದೃಷ್ಠವಶಾತ್ ತಾವು ತಂಗಿದ್ದ ಕೋಣೆಯ ಬಾತ್ ಟಬ್ ನಲ್ಲಿ ಮುಳುಗಿ ಅಸುನೀಗಿದ್ದರು ಎಂದು ಮರಣೋತ್ತರ ವರದಿ ತಿಳಿಸಿದೆ.
ಶ್ರೀದೇವಿ ಅವರು ತಮ್ಮ ಪತಿ ಬೋನಿ ಕಪೂರ್ ಅವರ ಆಸ್ತಿಯನ್ನು ಹೊರತುಪಡಿಸಿ ಬಿಲಿಯನ್ ಗಟ್ಟಲೆ ಆಸ್ತಿಯ ಒಡತಿಯಾಗಿದ್ದರು. ಅವರು 3 ಬಂಗಲೆಗಳು ಮತ್ತು 7 ವಾಹನಗಳು ಸೇರಿದಂತೆ 250 ಕೋಟಿ ರೂಪಾಯಿಗಳ ಆಸ್ತಿಯ ಒಡತಿಯಾಗಿದ್ದರು. ಇನ್ನು ಬಾಲಿವುಡ್ ಮೂಲಗಳ ಪ್ರಕಾರ, ಪ್ರತಿ ಚಿತ್ರಕ್ಕೆ 3.4 ಕೋಟಿ ರೂಪಾಯಿಯಿಂದ 4.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಇವಿಷ್ಟೇ ಅಲ್ಲದೇ 2011 ರಿಂದ ಚಲನಚಿತ್ರಗಳಿಗೆ ಹಿಂದಿರುಗಿದ ನಂತರ, ಅವರ ವಾರ್ಷಿಕ ಗಳಿಕೆ 13 ಕೋಟಿಗಳಿಗೆ ಏರಿಕೆಯಾಗಿತ್ತು.
ಇನ್ನು ಶ್ರೀದೇವಿಯ ಅವರ ಬಳಿ ಒಟ್ಟು 7 ಐಷಾರಾಮಿ ಕಾರುಗಳು ಇದ್ದು ಅವುಗಳ ಒಟ್ಟು ಮೌಲ್ಯ ಸುಮಾರು 9 ಕೋಟಿ. ಶ್ರೀದೇವಿಯ ಹೆಸರಿನಲ್ಲಿ ಮುಂಬೈನಲ್ಲಿ ಮೂರು ಬಂಗಲೆಗಳಿವೆ. ಮಾಧ್ಯಮ ವರದಿಗಳ ಪ್ರಕಾರ, ಈ ಮೂರು ಬಂಗಲೆಗಳನ್ನು ತಮ್ಮ ಆದಾಯದಿಂದ ಶ್ರೀದೇವಿ ಖರೀದಿಸಿದ್ದಾರೆ. ಇವುಗಳಲ್ಲಿ ಜುಹು, ವರ್ಸಾವಾ ಮತ್ತು ಲೋಖಂಡ್ವಾಲಾಗಳ ಬಂಗಲೆ ಸೇರಿವೆ. ಮೂರು ಬಂಗಲೆಗಳ ಒಟ್ಟು ವೆಚ್ಚ ಸುಮಾರು 62 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಲಕ್ಸ್ ಮತ್ತು ತನೀಷ್ ಮುಂತಾದ ದೊಡ್ಡ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಇವರಾಗಿದ್ದು , ಜಾಹೀರಾತು ಮೂಲಗಳಿಂದಲೂ ಆದಾಯ ಬರುತ್ತಿತ್ತು.