ಬೆಂಗಳೂರು, ಫೆ 27: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಜೈಲು ಸೇರಿರುವ ಶಾಸಕ ಹ್ಯಾರಿಸ್ ಪುತ್ರನಿಂದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಫೆ. 28 ರ ಮಂಗಳವಾರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸೋಮವಾರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮಂಗಳವಾರಕ್ಕೆ ಮುಂದೂಡಿತ್ತು. ಇದರಿಂದ ನಲಪಾಡ್ ಜೈಲು ಅಧೀಕ್ಷಕರ ಕಚೇರಿಯಲ್ಲಿ ಕಣ್ಣೀರಿಡುತ್ತಾ ಬ್ಯಾರಕ್ ಸೇರಿಕೊಂಡಿದ್ದ . ಇದಾದ ಬಳಿಕ ನಲಪಾಡ್ ತನ್ನ ತಂದೆ ಹ್ಯಾರಿಸ್ಗೆ ರಾತ್ರಿ ಮೂರು ಬಾರಿ ಕರೆ ಮಾಡಿದ್ದು, ಜಾಮೀನು ಬಗ್ಗೆ ವಿಚಾರಿಸಿದ್ದಾನೆ ಎನ್ನಲಾಗುತ್ತಿದೆ. ಜೈಲಿನಲ್ಲಿ ಇರಲು ಆಗುತ್ತಿಲ್ಲ, ಏನಾದರೂ ಮಾಡು ಅಂತ ಕೋಪದಿಂದ ಕೂಗಾಡಿ ಸರಿಯಾಗಿ ಊಟ ಮಾಡದೆ ಜೈಲು ಕೋಣೆಯೊಳಗೆ ಹೋಗಿದ್ದಾನೆ. ನಿದ್ದೆ ಕೂಡಾ ಮಾಡದೆ ಜೈಲಲ್ಲಿ ಜಾಮೀನು ಬಗ್ಗೆ ಯೋಚನೆ ಮಾಡಿಯೇ , ರಾತ್ರಿಯಿಡೀ ನಿದ್ದೆ ಮಾಡದೆ ಕಾಲ ಕಳೆದಿದ್ದಾನೆ ಎಂದು ತಿಳಿದು ಬಂದಿದೆ.