ಬೆಂಗಳೂರು, ಫೆ 27 : ಸುಮಾರು 19ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದ ವಿಕೃತ ಕಾಮಿ ಸೈಕೋ ಜೈ ಶಂಕರ್ ಫೆ. 26 ರ ರಾತ್ರಿ ಸೋಮವಾರ ರಾತ್ರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ಸೋಮವಾರ ಮದ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಬ್ಲೇಡ್ ನಿಂದ ಕತ್ತುಕೊಯ್ದುಕೊಂಡು ಜೈಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿದ ಪೊಲೀಸರು ಕೂಡಲೇ ಜೈಶಂಕರ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದರೂ ಕೂಡಾ ದಾರಿಯ ಮಧ್ಯೆ ಜೈಶಂಕರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಇದೇ ಜೈಶಂಕರ್ ಕಳೆದ ಎರಡು ವರ್ಷಗಳ ಹಿಂದೆ ಜೈಲಿನಿಂದ ಎಸ್ಕೇಪ್ ಅಗಲು ಪ್ರಯತ್ನಿಸಿ ಜೈಲಿನ ರಕ್ಷಣಾ ಗೋಡೆ ಹಾರಿ ಸೊಂಟ ಮುರಿದುಕೊಂಡಿದ್ದ. ಬಳಿಕ ಜೈಶಂಕರ್ ಜೈಲಿನಲ್ಲೇ ಚಿಕಿತ್ಸೆ ಪಡೆದಿದ್ದ. ಇತ್ತೀಚಿನ ಕೆಲವು ದಿನಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಂಕರನಿಗೆ ಪ್ರತ್ಯೇಕ ಸೆಲ್ ನೀಡಲಾಗಿತ್ತು. ತಮಿಳುನಾಡಿನ ಸೇಲಂ ಮೂಲದವನಾದ ಸೈಕೋ ಜೈಶಂಕರ್ ಕೊಯಮತ್ತೂರಿನಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪೊಲೀಸ್ ಪೇದೆಯ ಪತ್ನಿಯನ್ನೇ ಅತ್ಯಾಚಾರ ಎಸಗಿದ್ದ ಪ್ರಕರಣ ಸೇರಿದಂತೆ ತಮಿಳುನಾಡಿನಲ್ಲಿ 11 ಮಹಿಳೆಯರು , ಕರ್ನಾಟಕದ ಲ್ಲಿ 4 ಮಹಿಳೆಯರ ಅತ್ಯಾಚಾರ, ಕೊಲೆ ಪ್ರಕರಣಗಳು ಈತನ ವಿರುದ್ಧ ದಾಖಲಾಗಿತ್ತು.