ಮಂಗಳೂರು, ಫೆ 27 : ಎರಡು ದಿನಗಳ ಹಿಂದೆ ಜೈನ ತೀರ್ಥಂಕರ ಕಳವು ಮತ್ತು ಮಾರಾಟ ಪ್ರಕರಣ ವೇಳೆ ಕುಂದಾಪುರ ಪೊಲೀಸರಿಗೆ ಸೆರೆ ಸಿಕ್ಕಿದ ಆರೋಪಿ ಅಸ್ಟಿನ್ ಸಿಕ್ವೇರಾ(27) ದ.ಕ ಎನ್ ಎಸ್ ಯು ಐ ನ ಜಿಲ್ಲಾ ಕಾರ್ಯದರ್ಶಿಯಾಗಿದ್ದು ಇದೀಗ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಹುದ್ದೆಯಿಂದ ವಜಾ ಮಾಡಲಾಗಿದೆ. ಎನ್ ಎಸ್ ಯು ಐ ನ ರಾಜ್ಯ ಅಧ್ಯಕ್ಷರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣದಲ್ಲಿ ಮಂಗಳೂರಿನ ಕುಲಶೇಖರದ ನಿವಾಸಿಯಾಗಿರುವ ಆಸ್ಟೀನ್ ಸಿಕ್ವೇರಾ, ಪಡೀಲ್ ನಿವಾಸಿ ನೆವಿಲ್ ವಿಲ್ಫಿ ಮಸ್ಕರೇನಿಯಸ್, ಶಿವಮೊಗ್ಗದ ಅನಿಲ್ ಫುಟಾರ್ಡೋ ಎಂಬವರನ್ನು ಬಂಧಿಸಿಲಾಗಿತ್ತು. ಈ ಪೈಕಿ ಸ್ವೀಕೆರಾ ಕಾಂಗ್ರೆಸ್ ಶಾಸಕರು, ಹಿರಿಯ ಜನಪ್ರತಿನಿಧಿಗಳೊಂದಿಗೆ ಗುರುತಿಸಿಕೊಂಡಿದ್ದರು. ಆರೋಪಿ ಬಂಧನದ ನಂತರ ಇದೀಗ, ಆತ ಪ್ರತಿಷ್ಟಿತರ ಜತೆ ಇರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕ ಮೊಯ್ದೀನ್ ಬಾವ, ಜೆ.ಆರ್ ಲೋಬೋ ಮತ್ತಿತ್ತರ ಕಾಂಗ್ರೆಸ್ ಮುಖಂಡರೊಂದಿಗೆ ಇರುವ ಪೋಟೋಗಳು ಹರಿದಾಡುತ್ತಿದೆ.