ಉಡುಪಿ,ಫೆ.26: ಸುಮಾರು ಎಂಟು ವರ್ಷ ಪ್ರಾಯದ ಗಂಡು ಮಂಗವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ, ರಸ್ತೆ ದಾಟುವಾಗ ವಾಹನ ಡಿಕ್ಕಿ ಹೊಡೆದ ಪರಿಣಾಮ, ಮಂಗವು ಸಾವನಪ್ಪಿದ ಘಟನೆ ಫೆ.26, ರಂದು ಕುಂಜಿಬೆಟ್ಟು ಉಡುಪಿಯಲ್ಲಿ ನಡೆದದ್ದು ಬೆಳಕಿಗೆ ಬಂದಿದೆ.
ಸ್ಥಳಿಯರ ಮಾಹಿತಿಯ ಮೇರೆಗೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ವಿನಯಚಂದ್ರ ಸಾಸ್ತಾನ ಅವರು ಘಟನಾ ಸ್ಥಳಕ್ಕೆ ಧಾವಿಸಿ ಬಂದು, ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಂತ್ಯ ಸಂಸ್ಕಾರ ನಡೆಸಲು ಆದಿ ಉಡುಪಿಯ ಅರಣ್ಯ ಇಲಾಖೆಯ ವಠಾರದಲ್ಲಿ ಇರುವ ಪ್ರಾಣಿ ಕಳೇಬರ ದಹನ ಭೂಮಿಗೆ, ಅಂಬ್ಯುಲೆನ್ಸ್ ಮೂಲಕ ಮಂಗದ ಶವ ಸಾಗಿಸಲಾಯಿತು. ನಂತರ ಅರಣ್ಯ ಇಲಾಖೆಯ ಕಾನೂನು ನಿಯಮಾವಳಿ ಪ್ರಕಾರ ಅಂತಿಮ ಗೌರವ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಮಂಗದ ಅಂತ್ಯಸಂಸ್ಕಾರದ ಸಂದರ್ಭ ಅರಣ್ಯ ರಕ್ಷರಾದ ಕೇಶವ ಪೂಜಾರಿ, ಅರಣ್ಯ ವಿಕ್ಷಕರಾದ ಅಶ್ವಿನ್, ಶಿವಪ್ಪ, ಹಾಗೂ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ, ವಿನಯಚಂದ್ರ ಸಾಸ್ತಾನ ಉಪಸ್ಥಿತರಿದ್ದರು. ಮಂಗದ ಕಳೇಬರ ಸಾಗಟಕ್ಕೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಚಿತ ಅಂಬುಲೇನ್ಸ್ ಸೇವೆ ನೀಡಿತು. ಅಂತ್ಯ ಸಂಸ್ಕಾರದ ಖರ್ಚು ವೆಚ್ಚಗಳನ್ನು ಸಾರ್ವಜನಿಕರು ದೇಣಿಗೆ ನೀಡಿ ಭರಿಸಿದರು.