ಫೆ, 26 : ಜನಾಶೀರ್ವಾದ ಯಾತ್ರೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದ ಕಾರಣ ಕಾಂಗ್ರೆಸ್ ಮತ್ತಷ್ಟು ಆತ್ಮವಿಶ್ವಾಸದೊಂದಿದೆ ಶಕ್ತಿ ಪ್ರದರ್ಶನಕ್ಕೆ ಇದೀಗ ಸಿದ್ದವಾಗಿದೆ. ಎರಡು ದಿನಗಳ ಯಾತ್ರೆಯಲ್ಲಿ ಜನರಿಂದ ದೊರಕಿದ ಪಾಸಿಟಿವ್ ರೆಸ್ಪಾನ್ಸ್ ನಿಂದ ಉತ್ಸಾಹಗೊಂಡಿರುವ ಕಾಂಗ್ರೆಸ್ ನಾಯಕರು ಇಂದು ಎರಡನೇ ಹಂತದ ಮೂರನೇ ದಿನದ ಜನಾಶೀರ್ವಾದ ಯಾತ್ರೆಯನ್ನು ಮುಂದುವರೆಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಜನಾಶೀರ್ವಾದ ಯಾತ್ರೆ ಇಂದು ಬೆಳಗಾವಿ, ಹುಬ್ಬಳ್ಳಿ , ಧಾರವಾಡದಲ್ಲಿ ನಡೆಯಲಿದೆ.ಬಾಗಲಕೋಟೆಯ ಸರ್ಕಿಟ್ ಹೌಸ್ ನಲ್ಲಿ ತಂಗಿರುವ ರಾಹುಲ್ ಗಾಂಧಿ ಇವತ್ತು ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಯ ಅಧ್ಯಕ್ಷರು ಮತ್ತು ಕಾಂಗ್ರೆಸ್ ಹಿರಿಯ ನಾಯಕರುಗಳೊಂದಿಗೆ ಚುನಾವಣೆಯ ತಯಾರಿ ಕುರಿತು ಚರ್ಚೆ ಮಾಡಲಿದ್ದಾರೆ. ನಂತರ ಹೆಲಿಕ್ಯಾಪ್ಟರ್ ಮೂಲಕ ಬೆಳಗಾವಿಯ ರಾಮದುರ್ಗಕ್ಕೆ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಸವದತ್ತಿಗೆ ತೆರಳಿ, ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.