ಉಡುಪಿ, ಫೆ 25 : ರಾಜ್ಯ ಸರಕಾರ ಸಾಕಷ್ಟು ಅಭಿವೃದ್ದಿ ಪರ ಕೆಲಸಗಳನ್ನು ಮಾಡಿದ್ದರೂ ಕೂಡಾ ಎಲ್ಲಾ ಮೇಲಿನಿಂದ ಬಂದಿದ್ದು ಎನ್ನುತ್ತಾರೆ. ಮೇಲಿನಿಂದ ಬಂದಿದ್ದು ಮಳೆನಾ? ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ಮಣಿಪಾಲದಲ್ಲಿ ಫೆ.24ರಂದು ನಡೆದ "ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ " ಉದ್ಘಾಟಿಸಿ ಮಾತನಾಡಿದ ಅವರು ಒಂದಿಷ್ಟು ಮಂದಿ ಕೇವಲ ಭಾವನಾತ್ಮಕ ವಿಚಾರನ್ನು ಹೆಚ್ಚು ವೈಭವಿಕರಿಸುತ್ತಾರೆ ಈ ಮೂಲಕವಾದರೂ ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸುವ ಪ್ರಯತ್ನ ಅವರದ್ದು ಎಂದು ದೂರಿದರು. ಇದೇ ವೇಳೆ ಅವರು , ರಾಜ್ಯಕ್ಕೆ ಬಂದ ಶಾ ಅಭಿವೃದ್ದಿ ಎಷ್ಟು ಮಾಡಿದ್ದೀರಿ ಎನ್ನುವ ಬಗ್ಗೆ ಪ್ರಶ್ನೆ ಮಾಡದೇ , ಅಭಿವೃದ್ಧಿಯಿಂದ ಮತ ಬರುವುದಿಲ್ಲ ಅನ್ನೋ ರೀತಿ ಮಾತಾಡುತ್ತಾರೆ. ಈ ಬಗ್ಗೆ ಜನತೆಗೆ ನಿಜಾಂಶ ತಿಳಿದಿದೆ ಎಂದರು .
ಇದೇ ವೇಳೆ ಕಾಂಗ್ರೆಸ್ನಲ್ಲಿ ಯಾರೋ ಒಬ್ಬ ತಪ್ಪು ಮಾಡಿದ್ದಾರೆ, ಅವರಿಗೆ ತಕ್ಕ ಶಿಕ್ಷೆ ಸಿಗಲಿದೆ. ಆದರೆ ಬಿಜೆಪಿ ಅವರನ್ನು ಪೋಷಿಸುವ ಕೆಲಸ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.