ಫೆ. 25: ಮೈಸೂರು ಅರಸು ಮನೆತನದ ಯದುವೀರ್-ತ್ರಿಷಿಕಾ ದಂಪತಿಗೆ ಜನಿಸಿರುವ ಗಂಡು ಮಗುವಿನ ನಾಮಕರಣ ಕಾರ್ಯಕ್ರಮ ಬೆಂಗಳೂರು ಪ್ಯಾಲೇಸ್ ನಲ್ಲಿ ನಡೆಯಿತು . ಯದುವಂಶದ ಕುಡಿ, ಯುವರಾಜನಿಗೆ ರಾಜಮಾತೆ ಪ್ರಮೋದಾದೇವಿ ನಾಮಕರಣ ಮಾಡಿದ್ದು , ಮೊಮ್ಮಗನಿಗೆ ಆದ್ಯವೀರ್ ನರಸಿಂಹ ರಾಜ ಓಡೆಯರ್ ಎಂದು ಮುದ್ದಾದ ಹೆಸರು ಇಟ್ಟಿದ್ದಾರೆ. ಫೆ. 25 ರ ಭಾನುವಾರ ಬೆಂಗಳೂರು ಪ್ಯಾಲೆಸ್ ನಲ್ಲಿ ನಡೆದ ರಾಜಮನೆತನದ ಸಂಪ್ರದಾಯದಂತೆ ನಡೆದ ಸರಳ ಸಮಾರಂಭದಲ್ಲಿ ನಾಮಕರಣ ಶಾಸ್ತ್ರ ನೆರವೇರಿಸಲಾಯಿತು. ಸಮಾರಂಭದಲ್ಲಿ ರಾಜ ಕುಟುಂಬಸ್ಥರು ಭಾಗಿಯಾಗಿ ರಾಯಲ್ ಬೇಬಿಗೆ ಶುಭ ಹಾರೈಸಿದರು. ನಾಮಕರಣ ಪ್ರಯುಕ್ತ ಬೆಂಗಳೂರು ಪ್ಯಾಲೇಸ್ ಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ವಿದೇಶಿ ಪ್ರವಾಸಿಗರು ಸೇರಿದಂತೆ ನೂರಾರು ಜನ ಪ್ರವಾಸಿಗರು ನಿರಾಸೆ ಯಲ್ಲಿ ವಾಪಸ್ಸು ತೆರಳಿದ್ರು.ಯದುವೀರ್ ಪತ್ನಿ ತ್ರಿಷಿಕಾ ಡಿ 7 ರಂದು ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.