ಬೆಂಗಳೂರು, ಫೆ 25: ಫರ್ಜಿ ಕೆಫೆಯಲ್ಲಿ ಕ್ಷುಲಕ ಕಾರಣಕ್ಕೆ ವಿದ್ವತ್ ಮೇಲೆ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರದ ಜೈಲು ಸೇರಿರುವ ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್ ನಳಪಾಡ್ ಹಾಗೂ ಮತ್ತೊರ್ವ ಆರೋಪಿಅರುಣ್ಬಾಬು ಒಂದೇ ಸೆಲ್ನಲ್ಲಿದ್ದಾರೆ. ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿದ್ದರಿಂದ ಬೇಸರಗೊಂಡ ನಲಪಾಡ್ ಇದೀಗ ಜೈಲಿನಲ್ಲಿ ಸಮಯ ಕಳೆಯಲು ಸಿಬ್ಬಂದಿಯಿಂದ ಚೆಸ್ಬೋರ್ಡ್ ತರಿಸಿಕೊಂಡು ಆತನ ಗೆಳೆಯನೊಂದಿಗೆ ಚೆಸ್ ಆಡಿಕೊಂಡೇ ಕಾಲ ಕಳೆಯುತ್ತಿದ್ದಾನೆ. ಇನ್ನು ಜೈಲಿನಲ್ಲಿ ಸಾಮಾನ್ಯ ಖೈದಿ ಪ್ರಕಾರ ಜೀವನ ಸಾಗಿಸುತ್ತಿರುವ ನಲಪಾಡ್ ಬುಧವಾರ ರಾತ್ರಿ ಜೈಲಿನ ಹಿರಿಯ ಪೊಲೀಸ್ ಅಧಿಕಾರಿಯೊರ್ವರ ಬಳಿ ಮಲಗಲು ಹಾಸಿಗೆ ನೀಡುವಂತೆ ಕೇಳಿದ್ದಾನೆ, ಇದರಿಂದ ಕೆರಳಿದ ಅಧಿಕಾರಿ ಇದು ತಂಗಲು ಬಂದಿರುವ ಗೆಸ್ಟ್ ಹೌಸ್ ಅಲ್ಲ, ಜೈಲು ಎಂದು ಮೊಹಮದ್ ನೇರವಾಗಿ ಹೇಳಿದ್ದಾರೆ. ಮೊಹಮದ್ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಬಳಿಕ ಸುಮ್ಮನೆ ಸದ್ದಿಲ್ಲದೇ ಇರುವುದು ಒಳಿತು ಎಂದು ಅಧಿಕಾರಿ ಗದರಿದ್ದಾರೆ.
ವಿದ್ವತ್ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಮಹಮದ್ ಮತ್ತು ಆತನ ಆರು ಸ್ನೇಹಿತರನ್ನು ಮೂರು ಸೆಲ್ ಗಳಲ್ಲಿ ಇರಿಸಲಾಗಿದೆ. ಮೂವರು ಒಂದು ಕೊಠಡಿಯಲ್ಲಿ ಇನ್ನು ಮೂವರು ಇನ್ನೆರಡು ಕೊಠಡಿಯಲ್ಲಿದ್ದಾರೆ, ಕೇವಲ ಊಟ ತಿಂಡಿಗಾಗಿ ಮಾತ್ರ ಈ ಆರು ಮಂದಿ ಹೊರಗೆ ಬರುತ್ತಾರೆ, ಉಳಿದಂತೆ ಸೆಲ್ ಒಳಗೆ ಇರುತ್ತಾರೆ, ಜೈಲು ಸಿಬ್ಬಂದಿ ಸೇರಿದಂತೆ ಯಾರೊಂದಿಗೂ ಹೆಚ್ಚು ಮಾತನಾಡುತ್ತಿಲ್ಲ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.