ತುಳುನಾಡು ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ಕೂಗೂ ಹುಚ್ಚುತನದ್ದು ಎಂದು ರಂಗಕರ್ಮಿ ಡಿ.ಕೆ.ಚೌಟ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಮಾತನಾಡಿದ ಅವರು ಯುವ ಸಮೂಹ ಏನಾನ್ನದರೂ ಹೇಳಬಹುದು ಅದ್ರೆ ’ದಕ್ಷಿಣ ಕನ್ನಡ ಜಿಲ್ಲೆ ಎಂದೆಂದಿಗೂ ಕನ್ನಡ ನೆಲದ ಅವಿಭಾಜ್ಯ ಅಂಗ’ ಎಂದು ಹೇಳಿದರು. ತುಳು ಭಾಷೆ ಮತ್ತು ಕನ್ನಡ ಸಹೋದರಿಯರಿದ್ದಂತೆ, ಇವರಿಬ್ಬರ ನಡುವೆ ಪ್ರೀತಿ,ಗೌರವ ಇರಬೇಕು. ಇನ್ನು ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿದರೆ ಕನ್ನಡಕ್ಕೆ ಏನೂ ನಷ್ಟವಿಲ್ಲ. ಇದಕ್ಕಾಗಿ ನಾಡಿನ ಶಾಸಕರು ಹಾಗೂ ಸಂಸದರು ದೆಹಲಿಯಲ್ಲಿ ಹೋರಾಡಲಿ. ಇಲ್ಲದಿದ್ದರೆ ಈಗ ಸಣ್ಣದಾಗಿ ಕೇಳುತ್ತಿರುವ ಪ್ರತ್ಯೇಕತೆ ಕೂಗು ಮುಂದೆ ಅಪಾಯಕಾರಿಯಾಗಿ ಬೆಳೆಯಲು ಆಸ್ಪದ ಕೊಟ್ಟಂತಾಗುತ್ತದೆ. ಕನ್ನಡಿಗರು ತುಳು ಉಳಿಸಿಕೊಳ್ಳುವ ದೃಢನಿಶ್ಚಯ ಮಾಡಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.