ಪಿಎನ್ ಬಿ ಬ್ಯಾಂಕ್ನಲ್ಲಿ ವಜ್ರ ಉದ್ಯಮಿ ನೀರವ್ ಮೋದಿಯ 11,400 ಕೋಟಿ ರೂ. ಹಗರಣದ ಮುಖವಾಡ ಕಳಚಿ ಬೀಳುತ್ತಿದ್ದಂತೆ ಇದೀಗ ಇತರ ಬ್ಯಾಂಕ್ಗಳಲ್ಲಿ ಒಂದೊಂದೇ ಹಗರಣಗಳು ಬೆಳಕಿಗೆ ಬರಲಾರಂಭಿಸಿವೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ ವಜ್ರ ವಹಿವಾಟು ನಡೆಸುವ ಇನ್ನೊಂದು ಕಂಪೆನಿ ದ್ವಾರಕಾ ದಾಸ್ ಸೇಠ್ ಇಂಟರ್ನ್ಯಾಶನಲ್ ಸುಮಾರು 389.85 ಕೋಟಿ ರೂ. ಮೋಸ ಮಾಡಿರು ವುದು ಬಹಿರಂಗಗೊಂಡಿದೆ.ಇದೀಗ ಈ ಕಂಪನಿಯ ವಿರುದ್ದವೂ ಸಿಬಿಐ ದೂರು ದಾಖಲಿಸಿಕೊಂಡಿದೆ.ಲೆಟರ್ ಆಫ್ ಕ್ರೆಡಿಟ್ ಪಡೆದ ಕಂಪನಿ 2007-12ರ ಅವಧಿಯಲ್ಲಿ ಚಿನ್ನ ಹಾಗೂ ಅಮೂಲ್ಯ ಹರಳುಗಳನ್ನು ಖರೀದಿಸಲು ಸಾಲ ಮಾಡಿತ್ತು. ಬಳಿಕ ಈ ಸೊತ್ತುಗಳನ್ನು ವಿದೇಶಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿತ್ತು ವಿಶೇಷ ಅಂದರೆ ಈ ಬಗ್ಗೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸಿಬಿಐಗೆ ಆರು ತಿಂಗಳ ಹಿಂದೆಯೇ ದೂರನ್ನು ಸಲ್ಲಿಸಿತ್ತು. ಇನ್ನೊಂದೆಡೆ ಪಂಜಾಬ್ ನ್ಯಾಶನಲ್ ಬ್ಯಾಂಕ್ನಲ್ಲಿ ಮುದ್ರಾ ಯೋಜನೆ ಅಡಿ ನೀಡಿದ ಸಾಲ ಸೌಲಭ್ಯದಲ್ಲೂ ಗೋಲ್ ಮಾಲ್ ನಡೆದಿದೆ ಎಂದು ಸಿಬಿಐ ದೂರು ದಾಖಲಿಸಿಕೊಂಡಿದೆ.