ವಿಟ್ಲ, ಫೆ 23: ಮಾಣಿಲ ಶ್ರೀ ಧಾಮ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವೈಭವದ ಅಷ್ಟಪವಿತ್ರ ನಾಗಮಂಡಲೋತ್ಸವ ವಿಜೃಂಭಣೆಯಿಂದ ನಡೆದಿದೆ.
ಮೋಹನದಾಸ ಪರಮಹಂಸ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಾಗಪಾತ್ರಿ ಪೆರ್ಡೂರು ಶ್ರೀ ಕ್ಷೇತ್ರ ಕಲ್ಲಂಗಲದ ವೇದಮೂರ್ತಿ ರಾಮಚಂದ್ರ ಕುಂಜಿತ್ತಾಯರ ನೇತೃತ್ವದಲ್ಲಿ ಮುದ್ದೂರು ಕೃಷ್ಣ ಪ್ರಸಾದ ವೈದ್ಯ, ಬಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯ ಬಳಗದವರೊಂದಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ ಫೆ 21 ರಂದು ವಿಜೃಂಭಣೆಯಿಂದ ನಡೆಯಿತು.
ಶ್ರೀ ಕಟೀಲಿನ ವೇದಮೂರ್ತಿ ಕಮಲಾದೇವಿ ಪ್ರಸಾದ ಅಸ್ರಣ್ಣರ ಪೌರೋಹಿತ್ವದಲ್ಲಿ ಪುಣ್ಯಾಹ, ನಾಗದೇವರಿಗೆ ಸಾನ್ನಿಧ್ಯ ಕಲಶಾಧಿವಾಸ, ಆದಿವಾಸ ಹೋಮ ನಡೆಯಿತು. ಶ್ರೀ ನಾಗ ಸಾನ್ನಿಧ್ಯದಿಂದ ನಾಗಮಂಡಲ ಮಂಟಪಕ್ಕೆ ಹೂ, ಹಿಂಗಾರ, ಫಲವಸ್ತುಗಳ ಶೋಭಾ ಯಾತ್ರೆ ನಡೆಯಿತು. ರಾತ್ರಿ ಶ್ರೀ ನಾಗ ಸಾನ್ನಿಧ್ಯದಲ್ಲಿ ಹಾಲಿಟ್ಟು ಸೇವೆ ನಡೆದು, ಭಕ್ತರ ಸಮ್ಮುಖದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಸಂಪನ್ನಗೊಂಡಿತು.