ಸುಬ್ರಹ್ಮಣ್ಯ, ಫೆ 23: ಮಾರಕಾಸ್ತ್ರಗಳನ್ನು ಹಿಡಿದು ಮನೆ ಮಂದಿಗೆ ಬೆದರಿಕೆ ಒಡ್ಡಿ ದನಕಳ್ಳತನ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಮಹಿಳಾ ಭಕ್ತರ ಮೇಲೆ ತಲವಾರು ಬೀಸಿ ಬೆದರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಐವರು ಮುಸುಕು ಧಾರಿ ದುಷ್ಕರ್ಮಿಗಳ ತಂಡ ಸುಬ್ರಹ್ಮಣ್ಯ ದೇವಾಲಯದ ಪರಿಸರದಲ್ಲಿದ್ದ ದನಗಳನ್ನು ಕಾರಿನಲ್ಲಿ ತುಂಬಿಕೊಂಡು ಸಾಗಿಸಿದ್ದಾರೆ ಎಂದು ಹೇಳಲಾಗಿದೆ. ದುಷ್ಕರ್ಮಿಗಳ ಈ ಕೃತ್ಯವನ್ನು ದೇವಾಲಯದ ಪರಿಸರದಲ್ಲೇ ಇದ್ದ ಮಹಿಳಾ ಭಕ್ತರು ನೋಡಿದ್ದಾರೆ.
ಈ ಹಿನ್ನಲೆ ದುಷ್ಕರ್ಮಿಗಳನ್ನು ಪ್ರಶ್ನಿಸಿದ ಮಹಿಳಾ ಭಕ್ತರ ಮೇಲೆ ತಲವಾರು ಬೀಸಿ ಬೆದರಿಸಿ, ನಂತರ ಕದ್ದ ಹಸುಗಳೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಮಹಿಳಾ ಭಕ್ತರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಕುರಿತು ತನಿಖೆ ಆರಂಭಿಸಿರುವ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.