ಕಾಸರಗೋಡು, ಫೆ 22 : ಕಾರು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ ನಾಲ್ಕು ಲಕ್ಷ ರೂ . ನಗದು , ಐದು ಪವನ್ ಚಿನ್ನಾಭರಣ ದರೋಡೆಗೈದಿರುವ ಘಟನೆ ಕಾಸರಗೋಡಿನ ಕುಂಬಳೆಯ ಮೊಗ್ರಾಲ್ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ. ಫೆ 21 ರ ಬುಧವಾರ ತಡರಾತ್ರಿ ಬೈಕ್ ನಲ್ಲಿ ಬಂದ ಇಬ್ಬರು ಕಾರು ತಡೆದು ಕೃತ್ಯ ಎಸಗಿದ್ದಾರೆ. ಉದುಮದ ಝಕೀರ್ ದರೋಡೆಗೊಳಗಾದವರು . ಬೈಕ್ ಕಾರಿಗೆ ಡಿಕ್ಕಿ ಹೊಡೆಸಿ ಝಕೀರ್ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಕುಂಬಳೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.