ಕಾಸರಗೋಡು, ಫೆ 22: ಚೀಮೇನಿ ಪುಲಿಯನ್ನೂರಿನಲ್ಲಿ ನಿವೃತ್ತ ಶಿಕ್ಷಕಿಯ ಕೊಲೆಗೈದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅದೇ ಪರಿಸರದ ಇಬ್ಬರನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಇನ್ನೋರ್ವ ವಿದೇಶಕ್ಕೆ ಪರಾರಿಯಾಗಿರುವುದಾಗಿ ಮೂಲಗಳು ತಿಳಿಸಿವೆ. ೨೦೧೭ ರ ಡಿಸೆಂಬರ್ ೧೩ ರಂದು ರಾತ್ರಿ ಕೃತ್ಯ ನಡೆದಿತ್ತು. ರಾತ್ರಿ ಮನೆಗೆ ನುಗ್ಗಿದ ತಂಡವು ನಿವೃತ್ತ ಶಿಕ್ಷಕಿ ಪಿ . ವಿ ಜಾನಕಿ ಯವರನ್ನು ಕತ್ತು ಸೀಳಿ ಕೊಲೆಗೈದು , ಪತಿ ಕೃಷ್ಣನ್ ರವರ ಕುತ್ತಿಗೆ ಕಡಿದು ತಂಡವು ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿತ್ತು . ಈ ಪ್ರಕರಣದ ತನಿಖೆ ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ವಿಸ್ತರಿಸಿತ್ತು. ಈ ನಡುವೆ ಸ್ಥಳೀಯ ಪರಿಸರದ ಬ್ಯಾಂಕ್ ನಲ್ಲಿ ಚಿನ್ನಾಭರಣ ಅಡವಿಟ್ಟ ಬಗ್ಗೆ ಮಾಹಿತಿ ಲಭಿಸಿದ ಮೇರೆಗೆ ತನಿಖೆ ನಡೆಸಿದಾಗ ಹಂತಕರ ಸುಳಿವು ಲಭ್ಯವಾಗಿದ್ದು , ಪುಲಿಯನ್ನೂರು ಚಿರಿಕ್ಕುಳದ ರಿನೇಶ್ ( ೨೭) ಮತ್ತು ವೈಶಾಖ್ (೨೮) ಪೊಲೀಸ್ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಅರುಣ್ ( ೨೮) ವಿದೇಶಕ್ಕೆ ಪರಾರಿಯಾಗಿದ್ದಾನೆ.
ಆರೋಪಿ-ಅರುಣ್
ಆರೋಪಿ-ವೈಶಾಖ್
ಆರೋಪಿ-ರಿನೇಶ್
ಘಟನೆಯ ವಿವರ:
2017 ರ ಡಿಸೆಂಬರ್ 13 ರಂದು ರಾತ್ರಿ ಚೀಮೇನಿ ಪುಲಿಯನ್ನೂರಿನಲ್ಲಿ ಮನೆಯೊಂದಕ್ಕೆ ನುಗ್ಗಿದ ತಂಡವು ನಿವೃತ್ತ ಶಿಕ್ಷಕಿ ಪಿ . ವಿ ಜಾನಕಿ ಯವರನ್ನು ಕತ್ತು ಸೀಳಿ ಕೊಲೆಗೈದು , ಪತಿ ಕೃಷ್ಣನ್ ರವರ ಕುತ್ತಿಗೆ ಕಡಿದು ತಂಡವು ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿತ್ತು . ಈ ಪ್ರಕರಣ ಅತ್ಯಂತ ನಿಗೂಢವಾಗುತ್ತಾ ಬಂದಿದ್ದು, ಪ್ರಕರಣದಲ್ಲಿ ಪೊಲೀಸರು , ಸ್ಥಳೀಯರು ಸೇರಿದಂತೆ ನೂರಕ್ಕೂ ಅಧಿಕ ಮಂದಿಯನ್ನು ವಿಚಾರಣೆ ಗೊಳಪಡಿಸಿದ್ದರು. ಅಲ್ಲದೆ ಸಾಂಗ್ಲಿ ಯಿಂದ ವಾಹನದಲ್ಲಿ ಹಣ್ಣು ಹಂಪಲು ಮಾರಾಟಕ್ಕೆ ಬಂದಿದ್ದ ತಂಡ ಕೃತ್ಯ ನಡೆಸಿತ್ತು ಎಂಬ ಮಾಹಿತಿಯಂತೆ ಮಹಾರಾಷ್ಟ್ರದ ಸಾಂಗ್ಲಿಗೆ ತೆರಳಿ ತನಿಖೆ ನಡೆಸಿದ್ದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಮಾತ್ರವಲ್ಲದೆ ಈ ಹಿಂದೆ ಕಣ್ಣೂರು ಮತ್ತು ಪಾಲಕ್ಕಾಡ್ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಇದೇ ರೀತಿಯ ದರೋಡೆ ನಡೆದಿದ್ದು , ಇದರಿಂದ ಇಲ್ಲಿ ಲಭಿಸರುವ ಬೆರಳಚ್ಚು ಹಾಗೂ ಈ ಹಿಂದಿನ ಪ್ರಕರಣ ದಲ್ಲಿ ಶಾಮೀಲಾದವರ ಬೆರಳಚ್ಚುಗಳನ್ನು ತಲೆಹಾಕಲು ಪೊಲೀಸರು ತೀರ್ಮಾನಿಸಿದ್ದರು . ಇದೀಗ ಪ್ರಕರಣದ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು ಸ್ಥಳೀಯ ನಿವಾಸಿಗಳು ನಿಟ್ಟಿಸಿರುಬಿಡುವಂತಾಗಿದೆ.