ತುಳುನಾಡಿನ ಸಿನಿಮಾಗಳಲ್ಲಿ ಕ್ರಿಯೇಟಿವಿಟಿ ಹೆಚ್ಚಾಗಿ ಸದ್ದು ಮಾಡ್ತಾ ಇದೆ. ವಿಭಿನ್ನವಾದ ಟೈಟಲ್ ಹೊಸ ಹೊಸ ಪ್ರಯೋಗಗಳು ಎಂತವರನ್ನದರೂ ಒಮ್ಮೆ ಹುಬ್ಬೇರಿಸುವಂತೆ ಮಾಡುತ್ತಿದೆ. ಇದಕ್ಕೀಗಾ ಹೊಸ ಸೇರ್ಪಡೆ ಅಪ್ಪೆ ಟೀಚರ್ ಸಿನಿಮಾದ 360 ಡಿಗ್ರಿ ಪೋಸ್ಟರ್. ಚಿತ್ರದ ನಿರ್ದೇಶಕರು ಈ ಪೋಸ್ಟರ್ ನ್ನು ತಮ್ಮ ಸೋಶಿಯಲ್ ಮೀಡಿಯದಲ್ಲಿ ಆಪ್ ಲೋಡ್ ಮಾಡಿದ್ದೇ ತಡ ಎಲ್ಲರೂ ಬೆರಗು ಕಣ್ಣಿಂದ ನೋಡುವಂತೆ ಮಾಡಿದ್ದಾರೆ. ಒಂದೇ ಪೋಸ್ಟರ್ ನಲ್ಲಿ ತುಳುವಿನ 17 ಜನ ಕಲಾವಿದರನ್ನು ಅಪ್ಪೆ ಟೀಚರ್ ಸಿನಿಮಾದ ಪಾತ್ರಗಳಲ್ಲಿ ತೋರಿಸಿ ಸೈ ಎಣಿಸಿಕೊಂಡಿದ್ದಾರೆ. ಹಲವು ವಿಶೇಷತೆಗಳನ್ನು ಒಳಗೊಂಡ ಈ 360 ಡಿಗ್ರಿ ಪೊಸ್ಟರ್ ಹಿಂದಿರುವ ಕ್ರಿಯಾಶೀಲತೆ ಅಶ್ವಿನ್ ಅವರದ್ದು ಎನ್ನುತ್ತಾರೆ ಚಿತ್ರದ ನಿರ್ದೇಶಕ ಕಿಶೋರ್ ಮೂಡುಬಿದ್ರೆ . ಚಿತ್ರದಲ್ಲಿ ಗೋಪಿನಾಥ್ ಭಟ್ ಜ್ಯೋತಿಷಿಯಾಗಿಯೂ, ಅರವಿಂದ್ ಬೋಳಾರ್ ಜಾಲಿ ಬಾಯ್ ಆಗಿ , ಗದರುವ ತಾಯಿಯಾಗಿ ಉಷಾ ಭಂಡಾರಿ, ಮುಸ್ಲಿಂ ಹುಡುಗನಾಗಿ ಹಿತೇಶ್ ಕಾಪಿನಡ್ಕ ಹೀಗೆ ಅವರವರ ಪಾತ್ರ ಈ ಪೋಸ್ಟರ್ ನಲ್ಲಿ ರಿಪ್ಲೇಕ್ಟ್ ಆಗಿದೆ.. ಶರವೇಗದಲ್ಲಿ ಚಿತ್ರದ ಶೂಟಿಂಗ್ , ಡಬ್ಬಿಂಗ್ ಮುಗಿಸಿರುವ ನಿರ್ದೇಶಕರು ಚಿತ್ರದಲ್ಲಿ ಎಲ್ಲೂ ಕೂಡಾ ಗುಣಮಟ್ಟ ವಿಚಾರದಲ್ಲಿ ರಾಜಿಮಾಡಿಕೊಳ್ಳಲಿಲ್ಲ ಅನ್ನೋದನ್ನು ಹೇಳಲು ಮರೆಯಲ್ಲ.
ಇವಿಷ್ಟೇ ಅಲ್ಲದೆ ಮುಂದಿನ ವಾರ ಅಪ್ಪೆ ಟೀಚರ್ ಸಿನಿಮಾದ ಟೀಸರ್ ಬಿಡುಗಡೆ ಮಾಡುತ್ತೇವೆ ಎಂದು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ ಚಿತ್ರತಂಡ. ಅಪ್ಪೆ ಟೀಚರ್ ಚಿತ್ರ ಈಗಾಗಲೇ ಸೆನ್ಸಾರ್ ಅಂಗಳದಲ್ಲಿದ್ದು , ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ತೆರೆಗಪ್ಪಳಿಸೋದು ಗ್ಯಾರಂಟಿಯಾಗಿದೆ. ಎಲ್ಲವು ಅಂದುಕೊಂಡತೆ ಅದರೆ ಮಾರ್ಚ್ ಮೂರನೇ ವಾರ ಅಥವಾ ಕೊನೆಯ ವಾರದಲ್ಲಿ ಚಿತ್ರಾಭಿಮಾನಿಗಳು ಅಪ್ಪೆ ಟೀಚರ್ ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಬರಪೂರ ಹಾಸ್ಯದೊಂದಿಗೆ ಸೆಂಟಿಮೆಂಟ್ ಎಳೆಯನ್ನು ಮಿಶ್ರವಾದ ಚಿತ್ರ ಸ್ವಯಂಪ್ರಭಾ ಬ್ಯಾನರ್ ನಲ್ಲಿ ತಯಾರಾಗಿದೆ. ಚಿತ್ರವನ್ನು ಕೆ. ರತ್ನಾಕರ್ ನಿರ್ಮಿಸುತ್ತಿದ್ದು ಧರ್ಮಸ್ಥಳದ ಸುನೀಲ್ ,ಪುತ್ತೂರಿನ ನಿರೀಕ್ಷಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ . ಇವರಲ್ಲದೆ ಸಿನಿಮಾದೊಳಗೊಬ್ಬ ಸಿನಿಮಾ ಡೈರೆಕ್ಟರ್ ಆಗಿ ದೇವದಾಸ್ ಕಾಪಿಕಾಡ್ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಹಿತೇಶ್ ಕಾಪಿನಡ್ಕ, ಬೋಜರಾಜ ವಾಮಂಜೂರು, ಮುಂತಾದವರ ತಾರಾಗಣವಿದೆ. ಚಿತ್ರವನ್ನು ಉದಯ್ ಲೀಲಾ ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯಲಿದ್ದು, ಪ್ರದೀಪ್ ನಾಯಕ್ ಅವರ ಸಂಕಲನವಿದೆ. ವನೀಲ್ ವೇಗಸ್ ಅವರ ಸಂಗೀತವಿದ್ದರೆ ರವೀಂದ್ರ ಪ್ರಭು ಅವರ ರಾಗ ಸಂಯೋಜನೆ ಇದೆ.