ಫೆ, 18: 66 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಏಸ್ಮ್ಯಾನ್ ವಿಮಾನ ನ್ಪೋಟಗೊಂಡು ವಿಮಾನದಲ್ಲಿದ್ದಂತಹ ಎಲ್ಲಾ ಪ್ರಯಾಣಿಕರು ಸಾವಿಗೀಡಾದ ದುರಂತ ಅವಘಡ ಭಾನುವಾರ ನಡೆದಿದೆ. ಇರಾನ್ ನ ಆಸ್ಮಾನ್ ಏರ್ ಲೈನ್ಸ್ ಸಂಸ್ಥೆಯ ಎಟಿಆರ್ ವಿಮಾನ ಝಾಗ್ರೋಸ್ ಗುಡ್ಡಗಾಡು ಪ್ರದೇಶದಲ್ಲಿ ಪತನಕ್ಕೀಡಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಪಘಾತಕ್ಕೀಡಾದ ವಿಮಾನ ರಾಜಧಾನಿ ಟೆಹ್ರಾನ್ ನಿಂದ ಇಸ್ಫಹಾನ್ ಪ್ರಾಂತ್ಯದಲ್ಲಿನ ಯಸುಜ್ ಪಟ್ಟಣಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.ಟೇಕ್ ಆಫ್ ಆದ 20 ನಿಮಿಷಗಳಲ್ಲಿ ರಡಾರ್ ಸಂಪರ್ಕ ಕಳೆದುಕೊಂಡಿದೆ ವಿಮಾನ ಸ್ಫೋಟಗೊಳ್ಳುವ ಮುನ್ನ ಹುಲ್ಲುಗಾವಲಿನ ಮೇಲೆ ತುರ್ತು ಲ್ಯಾಂಡಿಂಗ್ ಆಗಲು ಯತ್ನಿಸಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಲಿ ಆ್ಯಂಬುಲೆನ್ಸ್ ಹೆಲಿಕಾಪ್ಟರ್ ಗಳ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸ್ಥಳೀಯ ಬುಡಕಟ್ಟು ಸಮುದಾಯದ ಜನರು ತೆರವು ಕಾರ್ಯಾಚರಣೆಯಲ್ಲಿ ಸಿಬ್ಬಂದಿಗೆ ನೆರವು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.