ಬೆಂಗಳೂರು, ಫೆ 18 : ಕಸನವಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇನ್ನು ಕೂಡಾ ಕಾರ್ಯಾಚರಣೆ ಮುಂದುವರಿದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಿಯಲ್ ಎಸ್ಟೇಟ್ ಏಜೆಂಟ್ ತನ್ವೀರ್ ಖಾನ್ ಎನ್ನುವಾತನನ್ನು ತನ್ವೀರ್ ಖಾನ್ ಬೆಳ್ಳಂದೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.ತನ್ವೀರ್ ಕಟ್ಟಡ ನಿರ್ಮಾಣದಲ್ಲಿ ಪಾಲುದಾರನಾಗಿದ್ದು. ಘಟನೆ ಬಳಿಕ ನಾಪತ್ತೆಯಾಗಿದ್ದ, ಇದೀಗ ಮತ್ತೊಬ್ಬ ಪಾಲುದಾರ ಕೃಷ್ಣಕಾಂತ್ ರೆಡ್ಡಿಯ ಪತ್ತೆಗಾಗಿ ಹುಡುಕಾಟ ಮುಂದುವರಿದೆ.
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ಬಿಬಿಎಂಪಿ ಎಂಜಿನಿಯರ್ ಮುನಿರೆಡ್ಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಟ್ಟಡ ನಿರ್ಮಾಣವಾಗುತ್ತಿರುವ ವಿಚಾರ ಮುನಿರೆಡ್ಡಿಯವರಿದೆ ತಿಳಿದಿತ್ತು. ಆದರೆ, ತಲೆಕೆಡಿಸಿಕೊಳ್ಳದ ಅವರು ಯಾವುದೇ ರೀತಿಯ ತಪಾಸಣೆಗಳನ್ನು ನಡೆಸಿರಲಿಲ್ಲ ಎಂದು ದೂರುಗಳು ಕೇಳಿಬರುತ್ತಿದೆ.