ಬೆಂಗಳೂರು, ಫೆ 16: ಮಾಧ್ಯಮ ಸಂಜೀವಿನಿ ಯೋಜನೆಯಡಿ ಪತ್ರಕರ್ತರಿಗೆ ಅಪಘಾತ ಸಂದರ್ಭದಲ್ಲಿ 5 ಲಕ್ಷ ರೂ.ವರೆಗಿನ ನೆರವು ನೀಡಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ಮಾಧ್ಯಮ ಭವನ ನಿರ್ಮಾಣಕ್ಕೆ 5 ಕೋಟಿ ರೂ. ನೆರವು ನೀಡುವುದಾಗಿ ಭರವಸೆ ನೀಡಿದ ಅವರು, ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೊಳಿಸುವ ಜೊತೆಗೆ ಪತ್ರಿಕೆ ವಿತರಕರಿಗೆ ಪತ್ರ್ಯೇಕ ಕ್ಷೇಮ ನಿಧಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.