ಬೆಂಗಳೂರು, ಫೆ 16: ಚುನಾವಣೆ ಸಮೀಪಿಸುತ್ತಿರುವ ಹೊಸ್ತಿಲಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 13ನೇ ಬಜೆಟ್ ಮಂಡಿಸುತ್ತಿದ್ದಾರೆ.
ಈ ಬಜೆಟ್ ಮಂಡಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿ 13ನೇ ಬಾರಿ ಮತ್ತು ಮುಖ್ಯಮಂತ್ರಿಯಾದ ಬಳಿಕ 6ನೇ ಬಜೆಟ್ ಮಂಡಿಸುತ್ತಿರುವುದು. 13 ಬಾರಿ ದಾಖಲೆ ಬಜೆಟ್ ಮಂಡಿಸಿದ್ದ ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸಮ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಆರ್ಥಿಕ ತಜ್ಞ ನಾನಲ್ಲ, ಅನುಭವಕ್ಕಿಂತ ಮಿಗಿಲಾದ ಜ್ಞಾನ ಬೇರೆ ಇಲ್ಲ. ರೈತನ ಮಗನಾದ ನನಗೆ ಅವರ ಸಂಕಷ್ಟಗಳ ಅನುಭವವಿದೆ, ರೈತರ ಬವಣೆ ನೀಗಿಸುವ ಪ್ರಯತ್ನ ಮಾಡಿದ್ದೇವೆ. ನಾನು ಕೇವಲ ಕನಸು ಬಿತ್ತುವವನಲ್ಲ. ಕನಸುಗಳನ್ನು ನನಸಾಗಿಸಲು ಪ್ರಯತ್ನಿಸುವವನು ಎಂದು ಹೇಳಿದ್ದಾರೆ.
ಇನ್ನೂ ಮೃತ ರೈತರ ಸಾಲ ಮನ್ನಾ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಸಹಕಾರಿ ಸಂಘದಲ್ಲಿ ಬೆಳೆ ಸಾಲ ಪಡೆದಿದ್ದ ರೈತರ 1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.