ಬಂಟ್ವಾಳ, ಫೆ 16: ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಕಾರ್ಮೆಲ್ ಕಾಲೇಜು, ಮೊಡಂಕಾಪು ಪ್ರೌಢಶಾಲೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ಕ್ರಾಸ್ ಸೊಸೈಟಿ ಇದರ ಸಂಯುಕ್ತ ಆಶ್ರಯದಲ್ಲಿ ದ್ವಿಕ್ರ ವಾಹನ ಸವಾರರಿಗೆ ಕಾನೂನು ಮಾಹಿತಿ ಶಿಬಿರ ಕಾರ್ಮೆಲ್ ಕಾಲೇಜಿನಲ್ಲಿ ನಡೆಯಿತು.
ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಪ್ರತಿಭಾ ಡಿ.ಎಸ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪೋಲೀಸ್ ರಿಗೆ ಹೆದರಿ ಹೆಲ್ಮೆಟ್ ಧರಿಸಬೇಡಿ ನಿಮ್ಮ ಜೀವದ ರಕ್ಷಣೆಗಾಗಿ ಗುಣಮಟ್ಟದ ಹೆಲ್ಮೆಟ್ ಧರಿಸಿ. ನಿಮ್ಮ ಜೀವದ ರಕ್ಷಣೆ ನಿಮ್ಮ ಜವಬ್ದಾರಿ, ಜೀವದ ಬೆಲೆಯನ್ನು ಅರಿತುಕೊಂಡು ಬೈಕ್ ರೈಡ್ ಮಾಡಿ ಎಂದು ಹೇಳಿದರು.
ಸರಕಾರದ ಆದೇಶಕ್ಕೆ ಅಥವಾ ಪೋಲಿಸ್ ರಿಗೆ ಹೆದರಿ ಕ್ರಮಗಳನ್ನು ಪಾಲಿಸುವ ಮೊದಲು ನಮ್ಮ ಜೀವದ ರಕ್ಷಣೆಗಾಗಿ ಮಾಡಿರುವ ಕಾನೂನು ಎನ್ನುವುದನ್ನು ಅರಿತುಕೊಂಡರೆ ರಸ್ತೆ ಅಪಘಾತದಲ್ಲಿ ಬಲಿಯಾಗುವುದನ್ನು ಕಡಿಮೆ ಮಾಡಬಹುದು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಬಂಟ್ವಾಳ ಟ್ರಾಫಿಕ್ ಪೋಲೀಸ್ ಉಪನಿರೀಕ್ಷಕ ಯಲ್ಲಪ್ಪ ಟ್ರಾಪಿಕ್ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲೆ ಸುಪ್ರಿಯಾ ಎಂ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಪ್.ಸಿ ಹಾಗೂ ಅದ್ಯಕ್ಷ ರು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಚಂದ್ರ ಶೇಖರ, ವಕೀಲರ ಸಂಘದ ಅಧ್ಯಕ್ಷ ವೆಂಕಟರಮಣ ಶೆಣೈ, ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಎಸ್.ಆಲಿ ಸಹಾಯಕ ಸರ್ಕಾರಿ ವಕೀಲರಾದ ಸತೀಶ್ ಕುಮಾರ್ ಶಿವಗಿರಿ, ಮೊಡಕಾಂಪು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸಿ. ನವೀನಾ, ಸಂಪನ್ಮೂಲ ವ್ಯಕ್ತಿ ವಕೀಲರಾದ ಕು. ವಿದ್ಯಾಲತ, ಟ್ರಾಫಿಕ್ ಪೋಲೀಸ್ ಠಾಣೆಯ ಎ.ಎಸ್.ಐ ಬಾಲಕೃಷ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.