ಬೆಂಗಳೂರು, ಫೆ 16: ಸುಪ್ರೀಂ ಕೋರ್ಟ್ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಇಂದು ಅಂತಿಮ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ ಹೆಚ್ಚುವರಿಯಾಗಿ ನೀರನ್ನು ನೀಡುವ ಕುರಿತು ಅನುಮೋದನೆ ನೀಡಿದೆ.
ಇದೀಗ ಕರ್ನಾಟಕದ ವಾದವನ್ನು ಭಾಗಶಃ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಕಾವೇರಿ ತೀರ್ಪನ್ನು ನೀಡಿದ್ದು, ತಮಿಳುನಾಡಿಗೆ ಹರಿಸಬೇಕಿರುವ ನೀರಿನ ಪ್ರಮಾಣವನ್ನು 177.2 ಟಿಎಂಸಿಗೆ ಇಳಿಕೆ ಮಾಡಿದೆ. ಈ ಮೂಲಕ ರಾಜ್ಯಕ್ಕೆ ಈ ಹಿಂದೆ ಹಂಚಿಕೆ ಮಾಡಿದ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ನೀಡಲಾಗಿದೆ.
ಪುದುಚೇರಿ ಮತ್ತು ಕೇರಳಕ್ಕೆ ಈಗಾಗಲೇ ಮಾಡಿರುವ ನೀರು ಹಂಚಿಕೆಯನ್ನು ಎತ್ತಿ ಹಿಡಿದ ಕೋರ್ಟ್, ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯದಳು ಸಮಾನ ಹಂಚಿಕೆ ತತ್ವ ಪರಿಪಾಲಿಸಹಬೇಕು ಎಂದು ಸಲಹೆ ನೀಡಿದೆ. ನದಿಗಳು ರಾಷ್ಟ್ರೀಯ ಸಂಪತ್ತುಗಳಾಗಿದ್ದು, ಯಾವುದೇ ರಾಜ್ಯ ಪೂರ್ಣ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.