ಕಾಸರಗೋಡು, ಫೆ 14 : ಕೇರಳದಲ್ಲಿ ಖಾಸಗಿ ಬಸ್ಸು ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ಮಾರ್ಚ್ ಒಂದರಿಂದ ಈ ದರ ಏರಿಕೆ ಜಾರಿಗೆ ಬರಲಿದೆ. ಕನಿಷ್ಠ ದರವನ್ನು ಏಳು ರೂ . ನಿಂದ ಎಂಟು ರೂ . ಗೇರಿಸಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆ ಪ್ರಯಾಣ ದರ ಏರಿಕೆಗೆ ಅನುಮತಿ ನೀಡಿದೆ. 2014 ರ ಬಳಿಕ ಪ್ರಯಾಣ ದರ ಮತ್ತೆ ಏರಿಕೆಯಾಗುತ್ತಿದೆ. ವಿದ್ಯಾರ್ಥಿಗಳ ರಿಯಾಯಿತಿ ದರ ಏರಿಕೆ ಮಾಡಿಲ್ಲ. ಎಂಟು ರೂ . ಕನಿಷ್ಠ ದರ ಅಲ್ಲದೆ ಕಿಲೋ ಮೀಟರ್ ದರವನ್ನು 64 ಪೈಸೆ ಯಿಂದ 70 ರೂ . ಗೆ ಹೆಚ್ಚಿಸಲಾಗಿದೆ. ಈ ನಡುವೆ ಸರಕಾರ ಕನಿಷ್ಠ ದರವನ್ನು ಕೇವಲ ಒಂದು ರೂ . ಮಾತ್ರ ಏರಿಕೆ ಮಾಡುವ ಮೂಲಕ ಹೆಸರಿಗೆ ಮಾತ್ರ ಏರಿಕೆ ಮಾಡಲಾಗಿದ್ದು , ಫೆ. 16 ರಿಂದ ನಡೆಸಲುದ್ದೇಶಿಸಿರುವ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಖಾಸಗಿ ಬಸ್ಸು ಮಾಲಕರ ಸಂಘ ತಿಳಿಸಿದೆ. ನಾಳೆ ಸಭೆ ಸೇರಿ ಮುಷ್ಕರದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಂಘವು ತಿಳಿಸಿದೆ.