ನವದೆಹಲಿ, ಫೆ 14 : ಕೇಂದ್ರ ಸರ್ಕಾರ, ಮುಸ್ಲಿಂರ ಹಜ್ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಿದ ಬೆನ್ನಲೇ ಇದೀಗ , ನಾಗಾಲ್ಯಾಂಡ್ ರಾಜ್ಯದಲ್ಲಿ , ಬಿಜೆಪಿ ಅಧಿಕಾರಕ್ಕೆ ಬಂದರೆ ಜೆರುಸ್ಲೇಮ್ ಗೆ ಕ್ರೈಸ್ತರಿಗೆ ಉಚಿತ ಪ್ರಯಾಣವನ್ನು ಕಲ್ಪಿಸುತ್ತದೆ ಎಂದು ಬಿಜೆಪಿ ಆಫರ್ ಮಾಡಿದೆ ಈಶಾನ್ಯ ರಾಜ್ಯದ ಸುದ್ದಿ ಕೇಂದ್ರಗಳು ವರದಿ ಮಾಡಿದೆ. ಆದರೆ ಈ ಆಫರ್ ಭಾರತದ ಎಲ್ಲಾ ಕ್ರಿಶ್ಚಿಯನ್ನರಿಗೋ, ಈಶಾನ್ಯ ರಾಜ್ಯದ ಅಥವಾ, ನಾಗಾಲ್ಯಾಂಡಿನಲ್ಲಿರುವ ಕ್ರಿಶ್ಚಿಯನ್ನರಿಗೆ ಮಾತ್ರವೋ ಎಂಬುವು ಇನ್ನು ಸ್ಪಷ್ಟವಾಗಿಲ್ಲ . ಸದ್ಯದಲ್ಲೇ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಈ ಮೂರು ರಾಜ್ಯಗಳು ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿದ್ದು ಮೇಘಾಲಯ ಹಾಗೂ ನಾಗಾಲ್ಯಾಂಡ್ ನಲ್ಲಿ 75 ಶೇಕಡಾಕ್ಕೂ ಹೆಚ್ಚಿನ ಜನರು ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದೀಗ ಬಿಜೆಪಿಯ ಈ ಚುನಾವಣಾ ಆಫರ್ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದ್ದು ತೀವ್ರ ಟೀಕೆಗಳು ಕೇಳಿಬರುತ್ತಿದೆ.