ಸುಳ್ಯ, ಫೆ 14 : ಇಲ್ಲಿನ ಅರಂತೋಡಿಯ ಬಿಳಿಯಾರಿನಲ್ಲಿ ಶಾಲಾ ಬಸ್ ನ ಚಕ್ರಕ್ಕೆ ಸಿಲುಕಿ 6 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನಪ್ಪಿದ ಹೃದಯ ವಿದ್ರಾವಕ ಘಟನೆ ಫೆ.12 ರ ಸೋಮವಾರ ನಡೆದಿದೆ. ಅರಂತೋಡು ಗ್ರಾಮದ ಬಿಳಿಯಾರು ಕುಲ್ಚಾರ್ ನಿವಾಸಿ ಅಪ್ಪಕುಂಝಿ ಹಾಗೂ ಉಷಾ ದಂಪತಿಯ ಪುತ್ರಿ ಅಗನ್ಯ ಕೆವಿಜಿ ಐಪಿಎಸ್ ನಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದು, ಸಂಜೆ ಶಾಲೆ ಮುಗಿಸಿ ಶಾಲಾ ಬಸ್ಸಿನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಗನ್ಯ ಬಸ್ಸಿನಿಂದ ಇಳಿಯುವ ವೇಳೆ ಆಕೆಯ ಟಿಫಿನ್ ಬಸ್ಸಿನಲ್ಲಿಯೇ ಉಳಿದುಕೊಂಡಿತ್ತು. ಅದನ್ನು ತೆಗೆದುಕೊಳ್ಳಲ್ಲು ಮುಂದಾದಾಗ ಚಾಲಕ ಧನಂಜಯ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಕಾರಣ ಬಾಲಕಿ ಬಸ್ಸಿನ ಚಕ್ರದಡಿಗೆ ಸಿಲುಕಿಕೊಂಡಳು. ಬಸ್ಸಿನಲ್ಲಿ ನಿರ್ವಾಹಕ ಇಲ್ಲದಿರುವುದೂ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ತಕ್ಷಣ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ , ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಅಗನ್ಯ ಮೃತಪಟ್ಟಿದ್ದಾಳೆ.