ಮಂಗಳೂರು, ಫೆ 13: ಫ್ರೆಂಡ್ಸ್ ಬಲ್ಲಾಳ್ ಬಾಗ್ - ಬಿರುವೆರ್ ಕುಡ್ಲ ಸಂಘಟನೆ ಕೇವಲ ಸಂಘಟನೆಯ ಕೆಲಸ ಕಾರ್ಯ ಮಾತ್ರವಲ್ಲದೇ ಬಡವರ, ದೀನ ದಲಿತರ, ಅಶಕ್ತರ ಪರವಾಗಿ ನಿಂತಿರುವ ಕರಾವಳಿಯ ಹೆಮ್ಮೆಯ ಸಂಘಟನೆಯಾಗಿದೆ.
ಉದಯ ಪೂಜಾರಿ ಬಳ್ಳಾಲ್ ಬಾಗ್ ಅವರ ನೇತೃತ್ವದಲ್ಲಿ ಅಂಬೆಗಾಲಿಡುತ್ತಾ ಬೆಳೆದು ಬಂದ ಫ್ರೆಂಡ್ಸ್ ಬಲ್ಲಾಳ್ ಬಾಗ್ - ಬಿರುವೆರ್ ಕುಡ್ಲ ಸಂಘಟನೆಯು ಇದುವರೆಗೆ 60 ಲಕ್ಷಕ್ಕೂ ಮಿಕ್ಕಿ ಆರ್ಥಿಕ ಸಹಾಯ ವಿತರಿಸಿ ನಿಜವಾದ ಸಂಘ ಶಕ್ತಿ ಏನು ಎಂಬುವುದನ್ನು ತೋರಿಸಿಕೊಟ್ಟಿದೆ.
ಫ್ರೆಂಡ್ಸ್ ಬಲ್ಲಾಳ್ ಬಾಗ್ - ಬಿರುವೆರ್ ಕುಡ್ಲ ಸಂಘಟನೆಯು ಕ್ಯಾನ್ಸರ್ ನಿಂದ ಬಳಲುತ್ತಿರುವ ಉರ್ವ ಅಶೋಕನಗರದ ನಿವಾಸಿ ತುಳಸಿ (41 ) ಇವರ ಮನೆಗೆ ತೆರಳಿ 50 ಸಾವಿರ ರೂಪಾಯಿ ನೆರವು ನೀಡಿದೆ.
ಈ ವೇಳೆ ಮಾತನಾಡಿದ ಸುಶಿತ್ ಉಡುಪಿ ಅವರು, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ನೇತೃತ್ವದಲ್ಲಿ ಯುವ ಶಕ್ತಿ ಒಂದು ಗೂಡಿ ಒಂದಿಷ್ಟು ಆರ್ಥಿಕ ನೆರವು ಸಂಗ್ರಹಿಸಿ ಬಡ ವರ್ಗಕ್ಕೆ ಹಸ್ತಾಂತರಿಸಿ ಒಂದಿಷ್ಟು ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಬಿರುವೆರ್ ಕುಡ್ಲ ಸಂಘಟನೆಯು ಎಲ್ಲಾ ಜಾತಿ, ಮತ, ಧರ್ಮದ ಜನರನ್ನು ಒಟ್ಟುಗೂಡಿಸಿ ಸಮಾನ ನ್ಯಾಯಪರವಾಗಿ ಕೆಲಸ ಮಾಡಿ ಎಲ್ಲರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಬಡವರ್ಗದ ಚಿಕಿತ್ಸೆಗಾಗಿ ಧನ ಸಹಾಯ, ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಹಸ್ತ, ನ್ಯಾಯಪರ ವಿಚಾರಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಾ ಮಾನವೀಯ ಕಾಳಜಿಯನ್ನು ಎತ್ತಿ ತೋರಿಸಿದೆ. ಇಂತಹ ಸಂಘಟನೆ ಮತ್ತೊಂದಿಲ್ಲ ಎಂದು ಶ್ಲಾಘಿಸಿದರು.
ಉದಯ ಪೂಜಾರಿ ಬಲ್ಲಾಳ್ ಬಾಗ್ ಮಾತನಾಡಿ, ಬಿರುವೆರ್ ಕುಡ್ಲ ಫ್ರೆಂಡ್ಸ್ ಬಲ್ಲಾಳ್ ಬಾಗ್ ಸರ್ವ ಧರ್ಮ ಸಾಮಾಜಿಕ ಚಟುವಟಿಕೆಗಾಗಿಯೇ ಹುಟ್ಟಿಕೊಂಡಿದೆ. ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯದ ಕಾರ್ಯಕರ್ತರು ನಮ್ಮ ಸಂಘಟನೆಯಲ್ಲಿ ದುಡಿಯುತ್ತಿದ್ದಾರೆ. ಧನ ಸಹಾಯಕ್ಕಾಗಿ ಪ್ರತಿಯೊಬ್ಬರೂ ಕೊಡುಗೆ ನೀಡುತ್ತಾರೆ. ಪ್ರತೀ ತಿಂಗಳಲ್ಲಿ ಅರ್ಹರನ್ನು ಗುರುತಿಸಿ ಧನ ಸಹಾಯ, ಸೌಲಭ್ಯ ವಿತರಣೆ ಮತ್ತಿತರ ಕಾರ್ಯವನ್ನು ಮಾಡುತ್ತಿದ್ದೇವೆ. ನಮ್ಮ ಸಂಘಟನೆ ಇದುವರೆಗೆ 60 ಲಕ್ಷಕ್ಕೂ ಮಿಕ್ಕಿ ಆರ್ಥಿಕ ನೆರವು ವಿತರಿಸಿದೆ ಎಂದರು.
ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಬಾಗ್, ಗೌರವಾಧ್ಯಕ್ಷ ಪ್ರಮೋದ್ ಬಳ್ಳಾಲ್ ಬಾಗ್, ಅಭಿಷೇಕ್ ಅಮೀನ್ ಬಿಕರ್ನಕಟ್ಟೆ, ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್, ರಣ್ ದೀಪ್ ಕಾಂಚನ್, ಉದಯ್ ಕುಮಾರ್ ಅಮ್ಮೇರಿಯಾ, ಸುರೇಶ್ ಪೂಜಾರಿ ದಂಬೆಲ್, ಮಹೇಶ್ ಪೂಜಾರಿ ಅಶೋಕನಗರ, ರೋಶನ್ ಮಿನೇಜಸ್, ಲೋಹಿತ್ ಗಟ್ಟಿ, ವಿನಿತ್ ರಾಜ್ ಅಶೋಕನಗರ, ರಾಜೇಶ್ ಬಿಕರ್ನಕಟ್ಟೆ, ರಾಕೇಶ್ ಸಾಲ್ಯಾನ್ ಚಿಲಿಂಬಿ, ರಾಕೇಶ್ ಕೋಟ್ಯಾನ್ ಪದ್ಮಾಸ್ಟೀಲ್, ಬಾಬಾ ಅಲಂಕಾರ್,ಮನೋಜ್ ಪಲ್ಗುಣಿ, ಕಿಶೋರ್ ಬಾಬು ಕೋಡಿಕಲ್, ಮನೀಶ್ ಚಿಲಿಂಬಿ, ರಿನಿತ್ ರಾಜ್ ಅಶೋಕನಗರ, ಹರ್ಷಿತ್ ಕೋಟ್ಯಾನ್, ಸುಧಾಕರ ಶೆಟ್ಟಿ ,ದಂಬೆಲ್ ನಿವಾಸಿ ಬಳಗ, ಬಿರುವೆರ್ ಕುಡ್ಲದ ಪದಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
.