ಮಂಗಳೂರು, ಫೆ 12: ವ್ಯಾಲೆಂಟೈನ್ಸ್ ಡೇ ಬದಲು ಎಲ್ಲೆಡೆ ಮಾತೃ-ಪಿತೃ ಪೂಜನೀಯ ದಿನವನ್ನು ಆಚರಿಸಲು ಸಂಘಟನೆಗಳು ಕರೆ ನೀಡಿದೆ.
ಹಿಂದೂ ಜನ ಜಾಗೃತಿ ಸಮಿತಿಯು, ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ನಡೆಯುವ ಅನೈತಿಕ ಕೃತ್ಯಗಳನ್ನು ತಡೆಯಬೇಕು ಹಾಗೂ ಶಾಲಾ ಕಾಲೆಜುಗಳಲ್ಲಿ ಮಾತೃ-ಪಿತೃ ಪೂಜನೀಯ ದಿನವಾಗಿ ಆಚರಿಸಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿಕೊಂಡಿದೆ.
ಈ ವಿಚಾರವಾಗಿ ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ರವೀಕಾಂತೇ ಗೌಡ ಅವರಿಗೆ ಹಿಂದೂ ಜನ ಜಾಗೃತಿ ಸಮಿತಿ ಮನವಿ ಮಾಡಿದೆ.
ವ್ಯಾಲೆಂಟೈನ್ಸ್ ಡೇ ಪಾಶ್ಚಾತ್ಯರ ಆಚರಣೆಯಾಗಿದ್ದು ಪೀಡನೆ, ಲೈಂಗಿಕ ಕಿರುಕುಳಕ್ಕೆ ಕಾರಣವಾಗುತ್ತಿದೆ. ಪಾರ್ಟಿ ಹೆಸರಿನಲ್ಲಿ ಮಾದಕ ದ್ರವ್ಯ ವ್ಯಸನಗಳು ಹೆಚ್ಚಾಗುತ್ತಿದ್ದು ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.