ಮಂಗಳೂರು, ಫೆ 11 : ಅದ್ಯಪಾಡಿಯಲ್ಲಿ ಫೆ.09 ರ ಶುಕ್ರವಾರ ತಡರಾತ್ರಿ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿ ದರೋಡೆ ಮಾಡಿದ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದೆಡೆ ಇದು ನೈತಿಕ ಪೊಲೀಸ್ ಗಿರಿಯ ತಿರುವು ಪಡೆದಿದೆ. ಈ ನಡುವೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿದೂರು ಕೂಡಾ ದಾಖಲಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಇಂಡಿಗೊ ವಿಮಾನಯಾನ ಕಂಪನಿಯ ಸಿಬ್ಬಂದಿಯೋರ್ವ ಮಹಿಳಾ ಸಿಬ್ಬಂದಿ ಜತೆ ತನ್ನ ಸಹೋದ್ಯೋಗಿಯೊಬ್ಬರ ಬರ್ತ್ ಡೇ ಪಾರ್ಟಿ ಮುಗಿಸಿ ವಿಮಾನ ನಿಲ್ದಾಣದ ಕಡೆಗೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಪಾರ್ಟಿ ಮುಗಿಸಿ ತೆರಳುವಾಗ ತಡವಾಗಿದ್ದು ಮಹಿಳಾ ಸಿಬ್ಬಂದಿ ತನ್ನ ಸಹೋದ್ಯೋಗಿಯ ಸಹಾಯ ಯಾಚಿಸಿದ್ದಾರೆ. ಕಾರು ಮರವೂರು ಸೇತುವೆ ಬಳಿ ತಲುಪಿದಾಗ ಬೈಕ್ ನಲ್ಲಿ ಸಾಗುತ್ತಿದ್ದ ಯುವಕರ ತಂಡ ಇದನ್ನು ಗಮನಿಸಿತ್ತು. ಬಳಿಕ ಇವರನ್ನು ತಡೆಗಟ್ಟಿ ಕಾರಿನ ಒಳಗೆ ಇಣುಕಿ ನೋಡಿದಾಗ ಮಾತಿಗೆ ಮಾತು ಬೆಳೆದಿದೆ. ಈ ಮದ್ಯೆ ಕಾರು ಬೈಕಿಗೆ ಗುದ್ದಿದೆ ಎಂದು ತಂಡದವರು ಆರೋಪಿಸಿದ್ದಾರೆ .ಆದಾಗಲೇ ವಿಷಯ ತಿಳಿದು ಇಂಡಿಗೋ ಸಂಸ್ಥೆಯ ಸಹೋದ್ಯೋಗಿಗಳು ಸಹಾಯಕ್ಕೆ ಆಗಮಿಸಿದ್ದಾರೆ. ಇತ್ತಂಡಗಳ ಮದ್ಯೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಇದೇ ವೇಳೆ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಯುವಕನ ಕೈಯಲ್ಲಿದ್ದ ಎಟಿಎಂ ನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಯುವಕ ಯುವತಿ ಇಬ್ಬರೂ ಗಾಯಗೊಂಡಿದ್ದೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಬಗ್ಗೆ ಐವರ ವಿರುದ್ದ ದರೋಡೆ ಮತ್ತು ಲೈಂಗಿಕ ಕಿರುಕುಳ ಕೇಸು ದಾಖಲಾಗಿದೆ.
ಯುವಕರಿಂದ ಪ್ರತಿದೂರು
ಐವರು ಬೈಕ್ ನಲ್ಲಿ ಮನೆಗೆ ಹೋಗುತ್ತಿದ್ದಾಗ ಅದ್ಯಪಾಡಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕಾರೊಂದು ನಿಂತಿತ್ತು. ಅದರ್ಲ್ಲಿ ಯುವಕ ಯುವತಿ ಕುಳಿತಿರುವುದನ್ನು ಗಮನಿಸಿ , ಅದರತ್ತ ಹೋಗಿ ವಿಚಾರಿಸಿದೆವು. ಆಗ ಯುವಕ ಯುವತಿ ಕುಳಿತಿರುವುದನ್ನು ಗಮನಿಸಿ ಅವರನ್ನು ವಿಚಾರಿಸಿದೆವು , ಆದರೆ ಆಗ ಅವರು ಭಯಭೀತರಾಗಿ ಕಾರು ಚಲಾಯಿಸಿ ಮುಂದೆ ಹೋಗುವ ಪ್ರಯತ್ನ ಮಾಡಿದಾಗ ಕಾರು ಬೈಕೊಂದಕ್ಕೆ ಡಿಕ್ಕಿಯಾಗಿ ಪರಾರಿಯಾಗಲು ಯತ್ನಿಸಿದೆ ಈ ಸಂದರ್ಭ ನಾವು ಕಾರನ್ನು ಬೆನ್ನಟ್ಟಿ ನಷ್ಟದ ಮೊತ್ತ ನೀಡುವಂತೆ ಕೇಳಿದವು. ಹಣವಿಲ್ಲ ಎಂದು ಎಟಿಎಂ ಕಾರ್ಡ್ ನೀಡಿ ಡ್ರಾ ಮಾಡುವಂತೆ ತಿಳಿದ್ದಾರೆ ಎಂದು ಬೈಕ್ ನ ಯುವಕರ ಗುಂಪು ಹೇಳಿದೆ. ಹಣ ಡ್ರಾ ಮಾಡಿ ವಾಪಾಸು ಎಟಿಎಂ ನೀಡಲು ಬಂದಾಗ ಕಾರಿನಲ್ಲಿದ್ದವರು ತಮ್ಮ ಗುಂಪನ್ನು ಕರೆಯಿಸಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಯುವಕರು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಕಾರು ರಸ್ತೆ ಬದಿಯ ಕಟ್ಟೆಗೆ ಡಿಕ್ಕಿ ಹೊಡೆದಿದೆ ಎಂಬುವುದು ಪೊಲೀಸರ ತನಿಖೆಯ ವೇಳೆ ತಿಳಿದು ಬಂದಿದೆ.