ಮಂಗಳೂರು,ಸೆ17: ಪಣಂಬೂರ್ ಬೀಚ್ಗೆ ಸ್ನೇಹಿತರ ಜತೆ ಈಜಾಡಲು ಬಂದಿದ್ದ ಬೆಂಗಳೂರು ಮೂಲದ ಸಾಯಿಕಿರಣ್ ನೀರುಪಾಲಾಗಿರುವ ಘಟನೆ ಇಂದು ನಡೆದಿದೆ. ಸಾಯಿಕಿರಣ್ ಮತ್ತು ಆತನ ಸ್ನೇಹಿತರು ಪಣಂಬೂರ್ ಬೀಚ್ಗೆ ಬಂದು ಸ್ನೇಹಿತರ ಜತೆ ಈಜಲು ತೆರಳಿದ್ರು.
ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಹಾಗೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನಲೆಯಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ ಈಜಲು ತೆರಳಿದ್ದ ಸಾಯಿಕಿರಣ್ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಇನ್ನು ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.