ಪುತ್ತೂರು, ಫೆ 7: ದ.ಕ. ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ. ಸಂಕಪ್ಪ ರೈ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂಕಪ್ಪ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನರಾಗಿದ್ದಾರೆ.
ಬೆಳ್ಳಿಪ್ಪಾಡಿ ಮನೆತನದ ಸಂಕಪ್ಪರೈ (85) ಅವರು ಸಚಿವ ರಮಾನಾಥ ರೈ ಅವರ ಕುಟುಂಬಸ್ಥರಾಗಿದ್ದು, ಅವಿವಾಹಿತರಾಗಿದ್ದರು. ಕೊಂಬೆಟ್ಟು ಎಂಬಲ್ಲಿ ಸಹೋದರಿಯ ಜೊತೆಗೆ ವಾಸವಾಗಿದ್ದರು.
ಮೃತದೇಹವನ್ನು ಕೊಂಬೆಟ್ಟು ಮನೆಯಲ್ಲಿ ಮಧ್ಯಾಹ್ನ ಸಾರ್ವಜನಿಕರ ದರ್ಶನಕ್ಕೆ ಇಟ್ಟ ಬಳಿಕ ಮಾಣಿ ನೇಲ್ತೊಟ್ಟು ಮನೆ ವಠಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ತಿಳಿದುಬಂದಿದೆ.