ಶ್ರೀನಗರ ಫೆ 06: ಬಂಧಿತ ಪಾಕಿಸ್ತಾನ ಮೂಲದ ಉಗ್ರ ಅಬು ಅಲಿಯಾಸ್ ನಾವೀದ್ ನನ್ನು ವೈದ್ಯಕೀಯ ತಪಾಸಣೆಗೆ ಕರೆತಂದಿದ್ದ ವೇಳೆ ಉಗ್ರಗಾಮಿಗಳು ಆಸ್ಪತ್ರೆ ಮೇಲೆ ಗುಂಡಿನ ದಾಳಿ ನಡೆಸಿ ಉಗ್ರ ಪರಾರಿಯಾಗಲು ಅನುವು ಮಾಡಿಕೊಟ್ಟ ಘಟನೆ ನಡೆದಿದೆ. ಫೆ 06 ರ ಮಂಗಳವಾರ ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾದ ಉಗ್ರ ಅಬು ಹನ್ ಝುಲ್ಲಾ ಹಾಗೂ ಇತರ ಐದು ಮಂದಿ ಬಂಧಿತರನ್ನು ಇಂದು ಬೆಳಗ್ಗೆ ಶ್ರೀನಗರದಲ್ಲಿರುವ ಶ್ರೀ ಮಹಾರಾಜ್ ಹರಿ ಸಿಂಗ್ ಸರಕಾರಿ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ, ಒಬ್ಬ ಕೈದಿ ಪೊಲೀಸ್ ಕೈಯಲ್ಲಿದ್ದ ರೈಫಲ್ ಅನ್ನು ಕಸಿದುಕೊಂಡು ಗುಂಡಿನ ದಾಳಿ ನಡೆಸಿದ್ದಾನೆ .ಪೊಲೀಸರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸ್ಥಿತಿ ಚಿಂತಾಜನಕವಾಗಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇನ್ನು ಈ ಗುಂಡಿನ ಚಕಮಕಿಯ ಬಳಿಕ ಉಗ್ರರು ಪರಾರಿಯಾಗಿದ್ದು, ಅವರ ಪತ್ತೆಯಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಅಲ್ಲದೆ ಸುತ್ತಮುತ್ತ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.