ಕಾಸರಗೋಡು ಫೆ 06 : ಆಫ್ರಿಕಾ ಕರಾವಳಿಯಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ತೈಲ ಸಾಗಾಟ ಹಡಗನ್ನು ಬಿಡುಗಡೆಗೊಳಿಸಿದ್ದು , ಕಾಸರಗೋಡಿನ ಶ್ರೀಉಣ್ಣಿ ಸೇರಿದಂತೆ ಎಲ್ಲಾ 22 ಮಂದಿ ಸುರಕ್ಷಿತರಾಗಿದ್ದಾರೆ ಎಂದು ಕಂಪೆನಿ ಮೂಲಗಳು ತಿಳಿಸಿವೆ. ಉದುಮ ಪೇರಳೆ ಹಿತ್ತಿಲಿನ ಶ್ರೀ ಉಣ್ಣಿ ಒತ್ತೆ ಸೆರೆಯಿಂದ ಬಿಡುಗಡೆಗೊಂಡ ಬಳಿಕ ಮನೆಯವರಿಗೆ ದೂರವಾಣಿ ಕರೆ ಮಾಡಿದ್ದು , ಮನೆಯಲ್ಲಿ ಸಂಭ್ರಮದ ಮನೆ ಮಾಡಿದೆ. ಕಳೆದ ಐದಾರು ದಿನಗಳಿಂದ ಸುರಕ್ಷಿತ ಬಿಡುಗಡೆಗಾಗಿ ಮನೆಯವರು ಎದುರು ನೋಡುತ್ತಿದ್ದರು.ಫೆಬ್ರವರಿ ಒಂದರಂದು ನೈಜೀರಿಯಾ ಸಮುದ್ರ ತೀರದಿಂದ ಮುಂಬೈ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಆಂಗ್ಲೋ ಈಸ್ಟನ್ ಎಕ್ಸ್ ಪ್ರೆಸ್ ತೈಲ ಟ್ಯಾಂಕರ್ ಹಡಗನ್ನು ಕಡಲ್ಗಳ್ಳರು ಅಪಹರಿಸಿದ್ದರು.ಹಡಗು ನೈಜೀರಿಯಾ ತೀರಕ್ಕೆ ತಲಪಿದ್ದು , ಹತ್ತು ದಿನಗಳೊಳಗೆ ಮುಂಬೈ ಗೆ ತಲುಪಲಿದೆ ಎಂದು ಕಂಪೆನಿ ಮೂಲಗಳು ಸ್ಪಷ್ಟಪಡಿಸಿವೆ. ಶ್ರೀ ಉಣ್ಣಿ ಬಳಿಕ ಮನೆಗೆ ತಲಪುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ