ಬ್ರಹ್ಮಾವರ ಫೆ 05: ಶ್ರೀರಕ್ಷಾ ಪ್ರೊಡಕ್ಷನ್ ಬ್ಯಾನರ್ನಡಿ ಹೊರಬರುತ್ತಿರುವ ಹೊಸ ತುಳು ಚಿತ್ರ ಕರ್ಣೆ ಇದರ ಮುಹೂರ್ತ ಸಮಾರಂಭ ಬ್ರಹ್ಮಾವರದ ಶ್ರೀ ಕುಲಮಹಾಸ್ತ್ರಿ ಅಮ್ಮನವರ ದೇವಸ್ಥಾನದಲ್ಲಿ ಸೋಮವಾರ ಜರುಗಿತು.
ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಚಿತ್ರ ತಂಡ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದರು ಮಾಧ್ಯಮಗಳೊಂದಿಗೆ ಮಾತನಾಡಿದ ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್, ಈ ಚಿತ್ರವೆನ್ನುವುದು ಹಾಸ್ಯಮಯ ಕೌಟುಂಬಿಕ ಚಿತ್ರವಾಗಿದ್ದು, ನುರಿತ ತಂತ್ರಜ್ಞರಿಂದ ಅದ್ಬುತವಾಗಿ ಮೂಡಿಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್ ಬಹಳಷ್ಟು ಹೆಸರು ಮಾಡಿದೆ. ಒಳ್ಳೆಯ ತಂಡದೊಂದಿಗೆ ಚಿತ್ರವು ಉಡುಪಿ - ಕುಂದಾಪುರ ಭಾಗದಲ್ಲಿ ಚಿತ್ರೀಕರಣ ನಡೆಸಲಿದೆ. 25 ದಿನಗಳ ಚಿತ್ರೀಕರಣದ ಶೆಡ್ಯೂಲ್ ನಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದರು.
ಶ್ರೀರಕ್ಷಾ ಬ್ಯಾನೆರ್ನಡಿ ಬರುತ್ತಿರುವ ಈ ಚಿತ್ರದ ನಾಯಕನಾಗಿ ಅರ್ಜುನ್ ಕಾಪಿಕಾಡ್ ನಟಿಸುತ್ತಿದ್ದು, ನಾಯಕಿಯಾಗಿ ಚಿರಶ್ರೀ ಅಂಚನ್ ನಟಿಸಲಿದ್ದಾರೆ. ಈ ಚಿತ್ರವನ್ನ ಸಾಕ್ಷತ್ ನಿರ್ದೇಶಿಸುತ್ತಿದ್ದು, ಚಿತ್ರದ ನಿರ್ಮಾಣವನ್ನ ರಕ್ಷಿತ್ ಸಾಲಿಯಾನ್ ಮತ್ತು ರಕ್ಷಿತ್ ಕೋಟ್ಯಾನ್ ಮಾಡುತ್ತಿದ್ದಾರೆ. ತಾರಾಗಣದಲ್ಲಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಗೋಪಿನಾಥ್ ಭಟ್, ಮಜಾಭಾರತ ಖ್ಯಾತಿಯ ಆರಾಧನಾ ಮೊದಲಾದವರು ಇದ್ದಾರೆ.