ಮಂಗಳೂರು ಫೆ 05: ಕನಿಷ್ಟ ವೇತನ ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಸಿಸಿಟಿಯು ಮತ್ತು ಅಖಿಲ ಭಾರತ ಬಂದರು ಕಾರ್ಮಿಕರ ನೇತೃತ್ವದಲ್ಲಿ ಜನವರಿ 29 ರಂದು ಆರಂಭಗೊಂಡ ಅನಿರ್ದಿಷ್ಟಾವಧಿ ಮುಷ್ಕರ 8 ನೇ ದಿನಕ್ಕೆ ಕಾಲಿಟ್ಟಿದೆ. ಶಿಪ್ಪಿಂಗ್ ಕಂಪನಿಯಲ್ಲಿ ದುಡಿತಾ ಇರುವ ಎಲ್ಲಾ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕನಿಷ್ಟ ವೇತನ ಪಾವತಿಸಬೇಕು, ಹೆಚ್ಚುವರಿ ಕೆಲಸಕ್ಕೆ ಗಂಟೆಗೆ 150 ರೂಪಾಯಿ ಹೆಚ್ಚುವರಿ ವೇತನ ನೀಡಬೇಕು. ಪ್ರತೀ ವರ್ಷ ಕನಿಷ್ಟ ವೇತನದ ಶೇ.20ರಷ್ಟು ಬೋನಸ್ ನೀಡಬೇಕು, ಬಂದರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರಿಗೆ ಕೆಲಸ ಖಾಯಂ ಮಾಡಬೇಕು. ಸೂಕ್ತ ಕಾರಣವಿಲ್ಲದೆ ಕೆಲಸದಿಂದ ವಜಾ ಮಾಡಬಾರದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎನ್ಎಂಪಿಟಿ ಶಿಪ್ಪಿಂಗ್ ಕಾರ್ಮಿಕರು ಕಳೆದ 8 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.