ಮುಂಬರುವ ರಾಜ್ಯ ವಿಧಾನ ಸಭೆ ಚುನಾವಣೆ ಮೇ 4 ಅಥವಾ 5 ರಂದು ನಡೆಯುವ ಸಾಧ್ಯತೆಗಳು ದಟ್ಟವಾಗಿದೆ.ಚುನಾವಣೆಯ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ತಯಾರಿ ನಡೆಸಲು ಆರಂಭಿಸಿದ್ದು, ಈ ಬಗ್ಗೆ ಮಾರ್ಚ್ 20 ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗುವುದು ಬಹುತೇಕ ಖಚಿತವಾಗಿದೆ. ಈ ಅಧಿಸೂಚನೆ ಹೊರಬಿದ್ದ ೪೫ ದಿನಗಳ ಬಳಿಕ ಚುನಾವಣೆ ನಡೆಯಬೇಕು. ಹಾಗಾಗಿ ಆ ಲೆಕ್ಕಚಾರದಲ್ಲಿ ಮೇ 4 ಅಥವಾ 5 ರಂದು ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.ಎಲ್ಲಾ ಅಂದುಕೊಂಡತೆ ಅದರೆ ಮೇ 8 ರಂದು ಮತ ಎಣಿಕೆ ಕಾರ್ಯ ನಡೆಯಬಹುದು. ಇನ್ನು ಬಹುತೇಕ ಒಂದೇ ಹಂತದಲ್ಲಿ ಚುನಾವಣೆ ನಡೆಯುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು ಇದರ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ನಿಲುವು ತಾಳಿದೆ ಈ ಕಾರಣಕ್ಕಾಗಿ ಚುನಾವಣಾ ಆಯೋಗ ಈ ಬೇಡಿಕೆಗೆ ಸ್ಪಂದಿಸಬಹುದೆಂದು ಕಾಣುತ್ತದೆ.