ಬೆಂಗಳೂರು : ನಗರದ ಶಾಂತಿನಗರದ ಒಂದನೇ ಡಿಪೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ವಿಚಾರಣೆ ನಂತರ ಬಸ್ಸಿನ ಕೆಳಗೆ ಸಿಲುಕಿ ಈ ಶವವನ್ನು ಎಳೆದುಕೊಂಡು ಬಸ್ಸು 70 ಕಿ.ಮಿ ಸಾಗಿ ಬಂದಿದೆ ಎಂದು ತಿಳಿದು ಬಂದಿದೆ. ಪತ್ತೆಯಾದ ಅಪರಿಚಿತ ವ್ಯಕ್ತಿಯ ಶವ ಅಪಘಾತದಿಂದ ಮೃತಪಟ್ಟಿರುವುದಾಗಿ ತನಿಖೆ ವೇಳೆ ತಿಳಿದು ಬಂದಿತ್ತು. ಬಳಿಕ ಸಿಸಿ ಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಪರಿಶೀಲಿಸಿದಾಗ ಚಾಲಕ ಚಾಲಕ ಮೊಹಿನುದ್ದೀನ್ ಅನುಮಾನಸ್ಪದವಾಗಿ ವರ್ತಿಸಿರುವುದು ಕಂಡು ಬಂದಿದೆ. ಬಳಿಕ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ
ಸಾಂದರ್ಭಿಕ ಚಿತ್ರ
ಘಟನೆಯ ವಿವರ-
ತಮಿಳುನಾಡಿನಿಂದ ಊಟಿ, ಮೈಸೂರು, ರಾಮನಗರ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ಬಸ್ಸು ನಸುಕಿನ ಜಾವ 1.30ರ ಸುಮಾರಿಗೆ ರಾಮನಗರ-ಚನ್ನಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬನಿಗೆ ಬಸ್ ಡಿಕ್ಕಿಯಾಗಿದೆ. ಆದರೆ ಚಾಲಕ ಕನ್ನಡಿಯಲ್ಲಿ ಗಮನಿಸಿದಾಗ ಏನೂ ಕಾಣದೇ ಇರೋದ್ರಿಂದ ಯಾವುದೋ ನಾಯಿ ಅಥವಾ ಕಲ್ಲಿಗೆ ಡಿಕ್ಕಿ ಹೊಡಿದಿದೆ ಎಂದು ಭಾವಿಸಿ , ಬಸ್ ನಿಲ್ಲಿಸದೆ ನೇರವಾಗಿ ಬೆಂಗಳೂರು ಡಿಪೋಗೆ ಬಂದಿದ್ದಾನೆ. ಅಪಘಾತದ ವೇಳೆ ಮೃತ ವ್ಯಕ್ತಿ ಕಾಲುಗಳು, ಬಸ್ಸಿನ ಚಾಸಿಯಲ್ಲಿ ಸಿಲುಕಿಕೊಂಡಿವೆ. ಘಟನಾ ಸ್ಥಳದಿಂದಲೇ ಅವರ ದೇಹವು ನೆಲಕ್ಕೆ ಉಜ್ಜಿಕೊಂಡು ನಗರದವರೆಗೂ ಬಂದಿದೆ. ಶವದ ಹಿಂಭಾಗವು ಛಿದ್ರವಾಗಿದೆ.
ಶಾಂತಿನಗರ ನಿಲ್ದಾಣಕ್ಕೆ ಬೆಳಿಗ್ಗೆ 2.30ರ ಸುಮಾರಿಗೆ ಬಸ್ ತಲುಪಿ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿರುವ ಚಾಲಕ ಮೊಹಿನುದ್ದೀನ್ ಸುಮಾರು ಮುಂಜಾನೆ 3 ಗಂಟೆಗೆ ಬಸ್ ತೆಗೆದುಕೊಂಡು ಡಿಪೋಗೆ ಹೋಗಿದ್ದಾರೆ. ಡಿಪೋ ಬಾಗಿಲು ಬಳಿಯೇ ಬಸ್ ನಿಲ್ಲಿಸಿ, ಶಬ್ದ ಬರ್ತಾ ಇದ್ದುದರಿಂದ ಸಂಶಯಗೊಂಡು ಬಸ್ಸಿನ ಹಿಂಬಾಗ ಪರೀಕ್ಷಿಸಿದಾಗ ಶವ ಸಿಲುಕಿರುವುದು ಕಂಡುಬಂದು ಗಾಬರಿಗೊಂಡ ಮೊಹಿನುದ್ದೀನ್, ಅದೇ ಸ್ಥಿತಿಯಲ್ಲಿಯೇ ಬಸ್ಸನ್ನು ಡಿಪೋ ಒಳಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಸ್ವಲ್ಪ ದೂರ ಹೋಗುವಷ್ಟರಲ್ಲೇ ಶವ ನೆಲಕ್ಕೆ ಉರುಳಿದೆ. ಇದನ್ನು ನೋಡಿದ ಚಾಲಕ ಹೆಣವನ್ನು ಎತ್ತಿ ಮತ್ತೊಂದು ಬಸ್ಸಿನಲ್ಲಿ ಬಚ್ಚಿಟ್ಟಿದ್ದಾನೆ. ಬಳಿಕ ತಮ್ಮ ಬಸ್ಸನ್ನು ನಿಗದಿಗೊಳಿಸಿರುವ ಜಾಗದಲ್ಲಿಯೇ ನಿಲ್ಲಿಸಿ ಮನೆಗೆ ಹೋಗಿದ್ದಾರೆ.ಆದರೆ ಬೆಳಗ್ಗೆ ಎಂದಿನಂತೆ ಬಸ್ಸನ್ನು ಸ್ವಚ್ಛಗೊಳಿಸಲು ಡಿಪೋ ಸಿಬ್ಬಂದಿಗಳು ಬಂದು ರಭಸವಾಗಿ ನೀರನ್ನು ಬಿಟ್ಟಾಗ ಶವವೊಂದು ಕೆಳಗೆ ಬಿದ್ದಿದೆ. ಈ ವೇಳೆ ಹೆದರಿದ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.