ಕಾರ್ಕಳ ಫೆ 04: ನಡುರಾತ್ರಿ ಮನೆಯ ಹಿಂಬಾಗಿನಿಂದ ಒಳ್ಳ ನುಗ್ಗಿದ ಕಳ್ಳರು ಮನೆಯ ಮಾಲೀಕ ಹಾಗೂ ಆತನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನ ಮತ್ತು ನಗದನ್ನು ದೋಚಿ ಪರಾರಿಯಾದ ಘಟನೆ ಕಾರ್ಕಳ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಜಂಕ್ಷನ್ ಎಂಬನಲ್ಲಿ ನಡೆದಿದೆ.
ಕಾರ್ಕಳ ಕಸಬಾ ಗ್ರಾಮದ ಬಂಗ್ಲಗುಡ್ಡೆ ಜಂಕ್ಷನ್ ಬಳಿ ಇರುವ ಬಿಎಸ್ಎನ್ಎಲ್ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಯಶೋದ ಹಾಗೂ ವಿಜಯಾ ಬ್ಯಾಂಕ್ ನಿವೃತ್ತ ಸಂಜೀವ್ ನಾಯ್ಕ್ ಎಂಬರಿಗೆ ಸೇರಿದ ಮನೆಗೆ ತಡರಾತ್ರಿ ಮೂವರಿದ್ದ ಕಳ್ಳರ ತಂಡ ಮನೆಯ ಹಿಂಬಾಗಿನ್ನು ತಟ್ಟಿದ್ದಾರೆ. ಮನೆಯ ಮಾಲೀಕ ಶಬ್ದ ಕೇಳಿ ಯಾರೋ ಪರಿಚಯಸ್ಥರು ಇರಬಹುದೆಂದು ಭಾವಿಸಿ ಮನೆಯ ಬಾಗಿಲನ್ನು ತೆಗೆದಾಗ ಕಳ್ಳರು ಮಾರಾಕಾಯಧವನ್ನು ತೋರಿಸಿ, ಬೆದರಿಕೆ ಹಾಕಿದ್ದಾರೆ. ಅಲ್ಲದೆ ಬಲತ್ಕಾರವಾಗಿ ಮನೆಯ ಒಳಗೆ ನುಗ್ಗಿ ಮನೆ ಯಜಮಾನ ಸಂಜೀವ್ ನಾಯ್ಕ್ ಎಂಬವರಿಗೆ ಗಂಭೀರವಾಗಿ ಹಲ್ಲೆ ನಡೆಸಿ ನಂತರ ಆ ತನ ಹೆಂಡತಿ ಯಶೋದ ಮೇಲೆ ಹಲ್ಲೆ ನಡೆಸಿದ್ದಾರೆ . ಬಳಿಕ ಮನೆಯನ್ನೆಲ್ಲಾ ಜಾಲಾಡಿದ ಕಳ್ಳರು ಸುಮಾರು 21 ಪವನ್ ಚಿನ್ನಾಭರಣ ಹಾಗೂ 2.50 ಲಕ್ಷ ನಗದು ಹಾಗೂ ಬೆಲೆಬಾಳುವ ಮೊಬೈಲ್ ಪೋನ್ ಗಳನ್ನು ದರೋಡೆಗೈದು ಪರಾರಿಯಾಗಿದ್ದಾರೆ. ಕಳ್ಳರು ಕನ್ನಡ ಮತ್ತು ತುಳುವಿನಲ್ಲಿ ಮಾತನಾಡುತ್ತಿದ್ದರು ಎಂದು ಸಂಜೀವ ನಾಯ್ಕ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ಹಲ್ಲೆಗೊಳಗಾದ ಸಂಜೀವ್ ನಾಯ್ಕ್ ಅಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಪೋಲಿಸ್ ಅಧಿಕಾರಿ ಗಳು ಬೇಟಿ ನೀಡಿದ್ದಾರೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಬೇಟಿ ನೀಡಿ ತನಿಖೆಯನ್ನು ಮುಂದುವರೆಸಿದ್ದಾರೆ.
ಎಎಸ್ಪಿ ಋಷಿಕೇಷ್ ಸೋನಾವಣೆ, ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ, ನಗರ ಪಿಎಸ್ಐ ನಂಜಾನಾಯ್ಕ್ ಭೇಟಿ ನೀಡಿ ಅರೋಪಿಗಳ ಶೋಧ ಕಾರ್ಯ ಮುಂದುವರಿಸಿದ್ದಾರೆ.