ಮಂಗಳೂರು ಫೆ 04 : ಅಮ್ಮ ನಡೆಗೆ ನಮ್ಮ ನಡೆ ಕಾರ್ಯಕ್ರಮದ ಐದನೇ ವರ್ಷದ ನಡಿಗೆಗೆ ಇಂದು ಚಾಲನೆ ದೊರೆಯಿತು. ಮರವೂರಿನ ದುರ್ಗಾಪರಮೆಶ್ವರಿ ದೇವಸ್ಥಾನದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕದ್ರಿ ಜೋಗಿ ಮಠದ ರಾಜಾ ನಿರ್ಮಲನಾಥ್ ಸ್ವಾಮಿ ಚಾಲನೆ ನೀಡಿ ಆಶೀರ್ವಚನ ನೀಡಿದರು. ಪಾದಯಾತ್ರೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡರು.
ದೇವಿಯನ್ನ ಭಕ್ತಿಯಿಂದ ಪ್ರಾರ್ಥಿಸಿ ಜೈಕಾರ ಹಾಕುತ್ತಾ ಪಾದಯಾತ್ರೆ ಆರಂಭಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ವಾಸುದೇವಾ ಅಸ್ರಣ್ಣ, ಮೇಯರ್ ಕವಿತಾ ಸನೀಲ್, ಪಾದಯಾತ್ರೆ ಸಮೀತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು.