ಉಡುಪಿ.ಫೆ 01: ಎಳೆಗೂಸಿಗೆ ಅಪರೂಪದ ಚಿಕಿತ್ಸೆ ಮಾಡುವ ಮೂಲಕ ಕಸ್ತೂರ್ಬಾ ಆಸ್ಪತ್ರೆಯ ಹೃದಯ ಚಿಕಿತ್ಸಾ ತಜ್ಞರು ಪ್ರಶಂಸೆಗೆ ಪಾತ್ರರಾಗಿರುವ ಘಟನೆ ನಡೆದಿದೆ. ಬ್ರಹ್ಮಾವರದ ನಿವಾಸಿಗಳಾದ ಪೂರ್ಣಿಮ ಹಾಗೂ ಹರೀಶ್ ದಂಪತಿಗಳ 11 ತಿಂಗಳ ಮಗು ಶರಣ್ ಎಂಬ ಮಗುವಿಗೆ ಅಪರೂಪದ ಚಿಕಿತ್ಸೆ ಮಾಡುವ ಮೂಲಕ ಇಡೀ ವೈದ್ಯ ಲೋಕವನ್ನು ಬೆರಗುಗೊಳಿಸಿದ್ದಾರೆ.
11 ತಿಂಗಳ ಎಳೆಯ ಮಗು ಶರಣ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಮಗುವಿನ ಪೋಷಕರು ಹತ್ತಿರದ ಆಸ್ಪತ್ರೆಯಲ್ಲಿ ಶರಣ್ನ ಆರೋಗ್ಯದ ಬಗ್ಗೆ ಪರೀಕ್ಷಿಸಿದಾಗ ಮಗು ಯಾವುದೋ ಕಾಯಿಲೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದೆ. ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಕೆ ಎಂ ಸಿ ಆಸ್ಪತ್ರೆಗೆ ದಾಖಲು ಮಾಡಲೆಂದು ಮಗುವನ್ನು ಈ ದಂಪತಿಗಳು ಕರೆ ತಂದಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿನ ಪೋಷಕರ ಮುಂದೆ ಅಘಾತಕಾರಿ ವಿಷಯವನ್ನು ಬಿಚಿಟ್ಟಿದ್ದಾರೆ. ಮಗು ಟಿ ಜಿ ಎ ಅಂದರೆ ದೊಡ್ಡ ರಕ್ತನಾಳಗಳ ಸ್ಥಾನ ಪಲ್ಲಟ ಎಂಬ ಕಾಯಿಲೆಯಿಂದ ಬಳಲುತ್ತಿರುವ ವಿಚಾರ ತಿಳಿದ ಮಗುವಿನ ಪೋಷಕರಿಗೇ ದಿಕ್ಕೇ ತೋಚದಂತಾಗಿತ್ತು. ಹೆತ್ತವರಿಗೆ ಆತ್ಮ ಸ್ಥೈರ್ಯ ತುಂಬಿದ ಆಸ್ಪತ್ರೆಯ ಹೃದಯ ಚಿಕಿತ್ಸಾ ತಜ್ಞ ಅರವಿಂದ್ ಬಿಷ್ನೋಯ್ ತನ್ನ ತಂಡದೊಂದಿಗೆ ಮಗುವಿನ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ವೈದ್ಯರ ಯಶಸ್ವಿ ಶಸ್ತ್ರ ಚಿಕಿತ್ಸೆ ಫಲಕಾರಿಯಾಗಿದ್ದು ಮಗು ಚೇತರಿಸಿಕೊಂಡಿದೆ. ವೈದ್ಯರ ಈ ಸಾದನೆ ವೈದಕೀಯ ಲೋಕದಲ್ಲಿ ಗಮನಾರ್ಹ ಸಾಧನೆಯಾಗಿದ್ದೂ ಎಲ್ಲಾರ ವಿಶ್ವಾಸಕ್ಕೆ ಪಾತ್ರವಾಗಿದೆ. ಇನ್ನೂ ಮಗುವಿನ ಚಿಕಿತ್ಸೆ ಭರಿಸಲು ಅಸಾಹಯಕರಾದ ಹೆತ್ತವರಿಗೆ ಆರ್ ಬಿ ಎಸ್ ಸ್ಕೀಮ್ನಿಂದ ಸಹಾಯಧನ ಲಭಿಸಿದೆ.