ಭಾರತೀಯರ ಅಪಾರ ನಿರೀಕ್ಷೆಗಳ ಮೂಟೆಯನ್ನು ಹೊತ್ತುಕೊಂಡು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಫೆಬ್ರವರಿ 1ರ ಗುರುವಾರದಂದು 2018-19ನೇ ಸಾಲಿನ ಕೇಂದ್ರ ಬಜೆಟ್ ಮಂಡಿನೆ ಆರಂಭಿಸಿದ್ದಾರೆ. ಸರಕು ಮತ್ತು ಸೇವಾ ತೆರಿಗೆಯನ್ನು( ಜಿ ಎಸ್ ಟ್ ) ವಿಂಗಡಿಸಿದ ನಂತರ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ತೆರಿಗೆ ಇಳಿಕೆಯ ನಿರೀಕ್ಷೆಯಲ್ಲಿ ವ್ಯಾಪಾರಿ ವರ್ಗದವರು ಮತ್ತು ಶ್ರೀಸಾಮಾನ್ಯರಿದ್ದಾರೆ. ಪ್ರಸಕ್ತ ವರ್ಷದ ಎಂಟು ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷದ ಲೋಕಸಭೆ ಚುನಾವಣೆಗಳನ್ನು ಎದುರು ನೋಡುತ್ತಿರುವ ಕೇಂದ್ರ ಸರಕಾರ ಈ ಬಜೆಟ್ ನ್ನು ಸಾರ್ವಜನಿಕರು ಕುತೂಹಲದಿಂದ ಎದುರು ನೋಡುತ್ತಿರುವಂತಾಗಿದೆ. ಅಲ್ಲದೆ ಕೇಂದ್ರ ಸರಕಾರ ಮಂಡಿಸುತ್ತಿರುವ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಇದಾಗಿದೆ. ಸುಮಾರು 11 ಗಂಟೆಯ ವೇಳೆಗೆ ಸಂಸತ್ತಿನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಹಿಂದಿ ಮತ್ತು ಅಂಗ್ಲ ಮಿಶ್ರ ಭಾಷೆಯಲ್ಲಿ ಬಜೆಟ್ ಮಂಡನೆ ಆರಂಭಿಸಿದರು.
ಬಜೆಟ್ ನ ಮುಖ್ಯಾಂಶ ಇಂತಿದೆ.
* ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನ ಆದಾಯ ತೆರಿಗೆ ಮಿತಿಯೇ ಮುಂದುವರಿಕೆ .
* ಹೆರಿಗೆ ರಜೆ 24 ವಾರದಿಂದ 26 ವಾರಕ್ಕೆ ಹೆಚ್ಚಳ.
* ಮೀನುಗಾರಿಕೆಗೆ 10 ಸಾವಿರ ಕೋಟಿ ಅನುದಾನ.
* ಬಿದಿರು ಕೃಷಿಗಾಗಿ 1,290 ಮೊತ್ತದ ನಿಧಿ.
* ಕ್ಷಯರೋಗಿಗಳಿಗೆ ತಿಂಗಳಿಗೆ 600 ರೂ ನೆರವು.
*ದುಬಾರಿಯಾಗಲಿದೆ ಮೊಬೈಲ್ ಫೋನ್: ಕಸ್ಟಮ್ಸ್ ತೆರಿಗೆ ಶೇ 15ರಿಂದ 20ಕ್ಕೆ ಏರಿಕೆ.
* ಭಾರತ್ ಮಾಲಾ ಯೋಜನೆಯಡಿ 35 ಸಾವಿರ ಕಿಮೀ ಮೇಲ್ದರ್ಜೆಗೆ 1 ಲಕ್ಷ 48 ಸಾವಿರದ 500 ಕೋಟಿ ರೂ ರೈಲ್ವೆಗೆ ಅನುದಾನ.
* 1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಹೈ ಸ್ಪೀಡ್ ಇಂಟರ್ ನೆಟ್ ಸಂಪರ್ಕ ಐಐಟಿ ಚೆನ್ನೈ ನಲ್ಲಿ 5 ಜಿ ಅಧ್ಯಯನ ಕೇಂದ್ರ 5 ಕೋಟಿ ಗ್ರಾಮೀಣ ನಾಗರಿಕರಿಗೆ 5 ಲಕ್ಷ ಆಸ್ಪತ್ರೆಗಳ ನಿರ್ಮಾಣ ಮುಂಬೈ ನಲ್ಲಿ ಲೋಕಲ್ ಟ್ರೈನ್ ಮಾರ್ಗ 90 ಕಿಮೀ ಹೆಚ್ಚಳ.
* ಮುದ್ರಾ ಯೋಜನೆಗೆ 3 ಲಕ್ಷ ಕೋಟಿ ರೂ ಮೀಸಲು.
* ಈ ವರ್ಷ 70 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ ಚಿಕ್ಕ, ಅತಿ ಚಿಕ್ಕ ಮಧ್ಯಮ ಗಾತ್ರದ ಉದ್ಯಮಕ್ಕೆ 3794 ಕೋಟಿ ಮೀಸಲು ಸಾರ್ವಜನಿಕ ಹೂಡಿಕೆಗೆ ಒತ್ತು ಟೆಕ್ಸ್ ಟೈಲ್ಸ್ ಉದ್ಯಮಕ್ಕೆ 7 ಸಾವಿರ ಕೋಟಿ ಮೀಸಲು
* ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳ ವೇತನ ಹೆಚ್ಚಳ. ರಾಷ್ಟ್ರಪತಿಗೆ ಮಾಸಿಕ 5 ಲಕ್ಷ ರೂ ವೇತನವಾದರೆ ರಾಜ್ಯ ಪಾಲರಿಗೆ ಮಾಸಿಕ 3.5 ಲಕ್ಷ ರೂಪಾಯಿ ವೇತನ. ಉಪರಾಷ್ಟ್ರಪತಿಗೆ 4 ಲಕ್ಷ ರೂಪಾಯಿ. ಪ್ರತಿ 5 ವರ್ಷಕ್ಕೊಮ್ಮೆ ಶಾಸಕರು ಮತ್ತು ಸಂಸದರ ವೇತನ ಪರಿಷ್ಕರಣೆ.
* 124 ವಿಮಾನ ನಿಲ್ದಾಣಗಳ ಅಭಿವೃದ್ಧಿ. ಬೆಂಗಳೂರಿಗೆ ಸಬ್ ಅರ್ಬನ್ ರೈಲು ಘೋಷಣೆ. 2018 ರ ಒಳಗೆ 18 ಸಾವಿರ ಕಿ.ಮೀ ರೈಲ್ವೇ ಮಾರ್ಗ ಡಬ್ಲಿಂಗ್. ಎಲ್ಲಾ ರೈಲುಗಳಲ್ಲಿ ವೈಫೈ, ಸಿಸಿಟಿವಿ. ರೈಲು ನಿಲ್ದಾಣಗಳಲ್ಲಿ 25 ಸಾವಿರ ಎಸ್ಕಲೇಟರ್ ಸ್ಥಾಪನೆ