ಅಬುದಾಭಿ ಮೊತ್ತ ಮೊದಲ ಬಾರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಅಬು ದಾಭಿಯಲ್ಲಿ ಸ್ಥಾಪಿಸಲಾಗುತ್ತಿದೆ. ಅಬು ದಾಭಿಯಲ್ಲಿನ ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ನಲ್ಲಿ ಗಾಂಧೀಜಿಯವರ ಪುತ್ಥಳಿಯನ್ನು ಫೆ. 1 ರ ಗುರುವಾರ ಅನಾವರಣ ಮಾಡಲಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಐ.ಎಸ್.ಸಿ ಅಧ್ಯಕ್ಷ ಜಯಚಂದ್ರನ್ ನಾಯರ್ ರವರು ಗಾಂಧಿ ಪುತ್ಥಳಿ ಸ್ಥಾಪಿಸುವ ಮೂಲಕ ಮಹಾತ್ಮನಿಗೆ ಯುಎಇನಲ್ಲಿ ಶಾಶ್ವತವಾದ ಮನೆ ಮಾಡಲಿದ್ದೇವೆ ಗಾಂಧಿಯ ಮೂರ್ತಿ ಸ್ಥಾಪನೆಯಿಂದ ಭಾರತ ಮತ್ತು ಯುಎಇ ನ ನಡುವೆ ಸ್ನೇಹಬಂಧದ ಸೇತುವೆ ನಿರ್ಮಾಣ ಆಗಲಿದೆ ಎಂದರು. . ವಿ.ಟಿ.ವಿ ದಾಮೋದರನ್, ಗಾಂಧಿ ಸಾಹಿತ್ಯ ವೇದಿ ಅಧ್ಯಕ್ಷ, ಈ ಯೋಜನೆಯ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿದ್ದಾರೆ. "ನನ್ನ ಬಹುಕಾಲದ ಕನಸನ್ನು, ಜಯಚಂದ್ರನ್ ಅರ್ಥ ಮಾಡಿಕೊಂಡು ಗಾಂಧಿ ಪ್ರತಿಮೆ ಸ್ಥಾಪನೆಗೆ ನೆರವಾಗಿದ್ದಾರೆ, ಇದೊಂದು ಐತಿಹಾಸಿಕ ಕ್ಷಣ" ಎಂದರು. 2018 ರ ವರ್ಷವನ್ನು "ಜಾಯೆದ್ ವರ್ಷ" ವೆಂದು ಆಚರಿಸಲಾಗುತ್ತದೆ. ಈ ಪ್ರತಿಮೆಯನ್ನು ಸ್ಥಾಪಿಸಲು ಭಾರತೀಯ ದೂತಾವಾಸವು ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಇನ್ನು ಈ ಗಾಂಧಿ ಪ್ರತಿಮೆಯೂ ಚಿತ್ರನ್ ಕುನ್ಹಿಮಂಗಲಂ ಅವರ 6 ತಿಂಗಳ ಪರಿಶ್ರಮದ ಫಲ ಎಂದರು.