ಬೆಂಗಳೂರು ಜ 31 : ಸೆರ್ಲಾಕ್ ಗಂಟಲಲ್ಲಿ ಸಿಲುಕಿ ಮೂರು ತಿಂಗಳ ಹೆಣ್ಣು ಮಗುವೊಂದು ಸಾವನಪ್ಪಿದ ದಾರುಣ ಘಟನೆ ಮಾಗಡಿ ತಾಲೂಕಿನ ಹೊಸಪಾಳ್ಯ ಎಂಬಲ್ಲಿ ಜ 31 ರ ಬುಧವಾರ ಬೆಳಗ್ಗೆ ನಡೆದಿದೆ. ಮಂಜುನಾಥ್ ಮತ್ತು ಧನಲಕ್ಷ್ಮಿ ಎನ್ನುವವರ ಮಗು ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಬೆಳಗ್ಗೆ ಸೆರ್ಲಾಕ್ ತಿನ್ನಿಸುವ ಸಂದರ್ಭ ಗಂಟಲಲ್ಲಿ ಸಿಲುಕಿ ಮಗು ಉಸಿರಾಟ ಸಮಸ್ಯೆಯಿಂದ ಒದ್ದಾಡಿದೆ. ತಕ್ಷಣ ಮಗುವನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಗು ಅದಾಗಲೇ ಮೃತಪಟ್ಟಿತ್ತು. ಎಳೆಕೂಸಿಗೆ 6 ತಿಂಗಳವರೆಗೆ ತಾಯಿಯ ಎದೆ ಹಾಲನ್ನು ಹೊರತು ಪಡಿಸಿ ಬೇರೆ ಯಾವುದೇ ಆಹಾರವನ್ನು ನೀಡಬಾರದು ಎನ್ನುವ ತಿಳುವಳಿಕೆಯ ಕೊರತೆಯಿಂದ, ಸೆರ್ಲಾಕ್ ತಿನ್ನಿಸಿ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ .