ಬಂಟ್ವಾಳ, ಜ 31 : ಮಹಿಳೆಯೊರ್ವರು ಸ್ನಾನ ಮಾಡುವಾಗ ಇಣುಕಿ ನೋಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಯುವಕನೋರ್ವನನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತನನ್ನು ಚೆಂಡ್ತಿಮಾರ್ ನಿವಾಸಿ 22 ವರ್ಷದ ಸಮರ್ಥ ಎಂದು ಗುರುತಿಸಲಾಗಿದೆ. ಚೆಂಡ್ತಿಮಾರ್ ನಿವಾಸಿಯಾದ ಮಹಿಳೆಯೋರ್ವಳು ಮುಂಜಾನೆ 5 ಗಂಟೆಯ ವೇಳೆ ತಮ್ಮ ಮನೆಯ ಸ್ನಾನದ ಕೋಣೆಯಲ್ಲಿ ಸ್ನಾನ ಮಾಡುವ ಸಂದರ್ಭ ಸಮೀಪದ ಮನೆಯ ನಿವಾಸಿ ಸಮರ್ಥ ಇಣುಕಿ ನೋಡಿದ್ದಾನೆ ಎಂದು ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ನಗರ ಠಾಣಾ ಉಪನಿರೀಕ್ಷಕ ಚಂದ್ರಶೇಖರ ಅರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.